Connect with us

ಕಾರ್ಕಳ

ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಸಮಿತಿಗೆ ನೂತನ ಅದ್ಯಕ್ಷರ ಆಯ್ಕೆ

Published

on

ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾರ್ಕಳ ಬ್ಲಾಕ್ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಶ್ರೀ ಶುಭದರಾವ್ ಮತ್ತು ಶ್ರೀ ಗೋಪಿನಾಥ್ ಭಟ್ ಇವರುಗಳನ್ನು ನೇಮಿಸಿ ಕರ್ನಾಟಕ ಪ್ರದೇಶ ಕಾಂಗ್ರೇಸ್ ಅದ್ಯಕ್ಷರಾದ ಶ್ರೀ ಡಿ.ಕೆ ಶಿವಕುಮಾರ್ ಆದೇಶವನ್ನು ನೀಡಿದ್ದಾರೆ.

ಕಾರ್ಕಳ ಬ್ಲಾಕ್ ಅದ್ಯಕ್ಷರಾಗಿದ್ದ ಶ್ರೀ ಸದಾಶಿವ ದೇವಾಡಿಗ ಹಾಗೂ ಹೆಬ್ರಿ ಬ್ಲಾಕ್ ಅದ್ಯಕ್ಷರಾಗಿದ್ದ ಚಂದ್ರಶೇಖರ್ ಬಾಯರಿಯವರ ಅದ್ಯಕ್ಷ ಅವಧಿಯು ಪೂರ್ಣಗೊಂಡ ಹಿನ್ನಲೆಯಲ್ಲಿ ನೂತನ ಅದ್ಯಕ್ಷರ ಆಯ್ಕೆ ನಡೆದಿದೆ.

ಬ್ಲಾಕ್ ಅದ್ಯಕ್ಷ ಸ್ಥಾನಕ್ಕೆ ಅಯ್ಕೆಯ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪ ಮೊಯಿಲಿಯವರ ಮಾರ್ಗದರ್ಶನದಲ್ಲಿ ಕೆ.ಪಿ.ಸಿ.ಸಿ‌ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹಾಗೂ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿಯವರು ಸಮ್ಮುಖದಲ್ಲಿ ಪಕ್ಷದ ಮುಖಂಡರು ಹಾಗೂ ವಿವಿದ ಘಟಕದ ಪಧಾದಿಕಾರಿಗಳ ಅಭಿಪ್ರಾಯವನ್ನು ಕಾಂಗ್ರೆಸ್ ಕಚೇರಿಯಲ್ಲಿ ಸಂಗ್ರಹಿಸಲಾಗಿತ್ತು.

ಶ್ರೀ ಶುಭದರಾವ್ ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿದ್ದು ಪ್ರಸ್ತುತ ಬ್ಲಾಕ್ ಕಾಂಗ್ರೇಸ್ ವಕ್ತಾರಾಗಿ, ಮತ್ತು ಕಾರ್ಕಳ ಪುರಸಭೆಗೆ ಸತತ ಮೂರನೇ ಬಾರಿ ಆಯ್ಕೆಯಾದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗೋಪಿನಾಥ್ ಭಟ್ ಪ್ರಸ್ತುತ ವರಂಗ ಪಂಚಾಯಿತಿ ಎರಡನೇ ಬಾರಿ ಸದಸ್ಯರಾಗಿ ಅಯ್ಕೆಯಾಗಿ ಸೇವೆ ಸಲ್ಲಿಸುತ್ತಿದ್ದು, ಪಕ್ಷದಲ್ಲಿ ವಿವಿಧ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ.

ಅದ್ಯಕ್ಷ ಆಯ್ಕೆಯ ಆದೇಶ ಪ್ರತಿಯನ್ನು ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಕಾಂಗ್ರೇಸ್ ಕಚೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ಸದಾಶಿವ ದೇವಾಡಿಗ, ಚಂದ್ರಶೇಖರ ಬಾಯಾರಿ, ಪ್ರವೀಣ್ ಬಲ್ಲಾಳ್, ರಮೇಶ್ ಕಾಂಚನ್, ಅಜಿತ್ ಹೆಗ್ಡೆ ಮಾಳ, ಲಕ್ಷ್ಮಣ್ ಆಚಾರ್, ಅಮೃತ್ ಶೆಣೈ, ವಿವೇಕಾನಂದ ಶೆಣೈ, ಸುಧಾಕರ ಶೆಟ್ಟಿ, ಹೇಮಂತ್ ಆಚಾರ್ಯ, ಕೃಷ್ಣ ಶೆಟ್ಟಿ ಬಜಗೋಳಿ, ಸುನೀಲ್ ಭಂಡಾರಿ, ಯೋಗೀಶ್ ಇನ್ನಾ, ದೀಪಕ್ ಶೆಟ್ಟಿ, ಪ್ರದೀಪ್ ಬೇಲಾಡಿ, ಸಂಜಯ್ ಆಚಾರ್ಯ ಉಡುಪಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Advertisement

Trending