Connect with us

ಕಾರ್ಕಳ

ಸಾಮಾಜಿಕ ಜಾಲತಾಣದಲ್ಲಿ ಇನ್ನಾ ರೈತಪರ ಹೋರಾಟಗಾರರ ಅವಹೇಳನ: ದೂರು ದಾಖಲು

Published

on

ಕಾರ್ಕಳ ಡಿ 11: ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಕೃಷಿ ಭೂಮಿಯ ನಡುವೆ ನಂದಿಕೂರು,ವಿನಿಂದ ಕೇರಳ ರಾಜ್ಯಕ್ಕೆ ಹಾದು ಹೋಗಲಿರುವ ಅದಾನಿ ಕಂಪನಿಯ ವಿದ್ಯುತ್ ಟವರ್ ಗಳ ವಿರುದ್ಧ ಇನ್ನಾ ಗ್ರಾಮಸ್ಥರು ಹಾಗೂ ರೈತರು ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿದ್ದು ಪ್ರತಿಭಟನಾ ನಿರತರ ಪೋಟೋವನ್ನು ತಿರುಚಿ ಅವಹೇಳನಕಾರಿ ಬರಹ ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ನಾಲ್ವರ ವಿರುದ್ದ ಪ್ರತಿಭಟನಾಕಾರರು ಪಡುಬಿದ್ರಿ ಪೋಲಿಸ್ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ.

ಇನ್ನಾ ಗ್ರಾಮದ ಫಲವತ್ತಾದ ಕೃಷಿ ಭೂಮಿಯ ನಡುವೆ ಅಧಾನಿ ಕಂಪನಿಯ ಟವರ್ ಅಳವಡಿಕೆಯ ಯೋಜನೆಯು ಸಿದ್ದಗೊಂಡು ಕಂಪನಿಯು ಕಾಮಗಾರಿಗೆಂದು ಸ್ತಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಸ್ಥಳದಲ್ಲಿ ಒಂದುಗೂಡಿ ಪ್ರತಿಭಟನೆ ನಡೆಸಿ ಕಂಪನಿ ಅಧಿಕಾರಿಗಳನ್ನು ಸ್ಥಳದಿಂದ ಹಿಮ್ಮೆಟ್ಟಿಸಿದ್ದರು. ಅಂದು ಗ್ರಾಮಸ್ಥರ ಪ್ರತಿಭಟನೆಗೆ ತಲೆಬಾಗಿ ಜಾಗ ಕಾಲಿ ಮಾಡಿದ್ದ ಅದಾನಿ ಕಂಪೆನಿಯ ಅಧಿಕಾರಿಗಳು ಕೆಲವೇ ದಿನದಲ್ಲಿ ಯಾವುದೇ ಅನುಮತಿ ಪಡೆಯದೆ ಮತ್ತೆ ವಿದ್ಯುತ್ ಟವರ್ ಅಳವಡಿಕೆ ಕಾಮಗಾರಿ ಆರಂಭಿಸಲು ಮುಂದಾಗುತ್ತಿದ್ದಂತೆ ಸುದ್ದಿ ತಿಳಿದ ಗ್ರಾಮಸ್ಥರು ಹಾಗೂ ಟವರ್ ನಿರ್ಮಾಣ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಂಪನಿಯನ್ನು ಹಿಮ್ಮೆಟ್ಟಿಸಿ ಸ್ಥಳದಿಂದ ಕದಲದೇ ಒಂದು ವಾರದಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಇನ್ನಾ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಕುಶ.ಆರ್.ಮೂಲ್ಯ, ಹಾಗೂ ಗ್ರಾಮಸ್ಥರಾದ ರವಿ ಶೆಟ್ಟಿ, ಸುರೇಶ್ ಮೂಲ್ಯ ಅವರು ಪ್ರತಿಭಟನಾ ಸ್ಥಳದ ವೇದಿಕೆಯಲ್ಲಿದ್ದ ಪೋಟೋವನ್ನು ದುಷ್ಕರ್ಮಿಗಳು ದುರ್ಬಳಕೆ ಮಾಡಿಕೊಂಡು ತಿರುಚಿ ಪ್ರತಿಭಟನೆಯನ್ನು ಅವಹೇಳನಗೈದು ನಿಂದಿಸಿ ಅವಾಚ್ಯ ಬರಹಗಳಿಂದ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ತಮ್ಮ ಗೌರವಕ್ಕೆ ಹಾನಿಯುಂಟು ಮಾಡಿದ್ದಾರೆ ಎಂದು ಪಡುಬಿದ್ರಿ ಪೊಲೀಸ್ ಠಾಣೆಗೆ ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ.

Advertisement

Trending