Connect with us

ಕಾರ್ಕಳ

ಇನ್ನಾ ಗ್ರಾಮಸ್ಥರನ್ನು ಒಕ್ಕಲೆಬ್ಬಿಸುವ ಅಭಿವೃದ್ಧಿ ನಮಗೆ ಬೇಕಾಗಿಲ್ಲ: ಉದಯ ಶೆಟ್ಟಿ ಮುನಿಯಾಲು

Published

on

ಅದಾನಿ ವಿದ್ಯುತ್ ಟವರ್ ನಿರ್ಮಾಣ ಕಾಮಗಾರಿ ವಿರುದ್ದ ಟವರ್ ನಿರ್ಮಾಣ ವಿರೋದಿ ಸಮಿತಿ ನೇತೃತ್ವದಲ್ಲಿ ಇನ್ನಾ ಗ್ರಾಮದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಪ್ರತಿಭಟನೆಯ ಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಉದಯ ಶೆಟ್ಟಿ ಮುನಿಯಾಲು ಅವರು ಮಾತನಾಡಿ ಯಾವುದೇ ಕಾರಣಕ್ಕೂ ಟವರ್ ನಿರ್ಮಾಣ ಯೋಜನೆಗೆ ಅವಕಾಶ ನೀಡುವುದಿಲ್ಲ. ಜನರಿಗೆ ತೊಂದರೆ ಉಂಟು ಮಾಡುತ್ತಿರುವ, ಕೃಷಿ ಭೂಮಿಗೆ ತೊಂದರೆಯುಂಟು ಮಾಡುತ್ತಿರುವ ಅವೈಜ್ಞಾನಿಕ ಯೋಜನೆಯ ಬದಲಾಗಿ ವೈಜ್ಞಾನಿಕ ರೀತಿಯಲ್ಲಿ ಭೂಗತ ಕೇಬಲ್,ಗಳ ಅಳವಡಿಕೆಯನ್ನು ಮಾಡಿದರೆ ಗ್ರಾಮದ ಕೃಷಿ ಭೂಮಿ ಉಳಿಯಲು ಸಾದ್ಯವಿದೆ, ಹಾಗಾಗಿ ಕಂಪನಿಯು ವೈಜ್ಞಾನಿಕ ರೀತಿಯ ತಂತ್ರಜ್ಞಾನವನ್ನು ಕಾಮಗಾರಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಟವರ್ ನಿರ್ಮಾಣ ವಿರೋದಿ ಸಮಿತಿಯ ಅಧ್ಯಕ್ಷರಾದ ಅಮರನಾಥ ಶೆಟ್ಟಿ ಮಾತನಾಡಿ ಟವರ್ ಅಳವಡಿಕೆ ಯೋಜನೆಯು ಗ್ರಾಮದಿಂದ ಒದ್ದೋಡಿಸುವ ತನಕ ವಿರಮಿಸುವುದಿಲ್ಲ, ಅವೈಜ್ಞಾನಿಕ ಕಾಮಾಗಾರಿಯ ಬದಲು ವೈಜ್ಞಾನಿಕ ಕ್ರಮಗಳನ್ನು ಅಳವಡಿಸುವಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಹೋರಾಟಗಾರರಾದ ಕುಶ.ಆರ್.ಮೂಲ್ಯ, ಜಯ ಕೋಟ್ಯಾನ್ ಇನ್ನಾ, ದೀಪಕ್ ಕೋಟ್ಯಾನ್, ಅನಿತಾ ಡಿಸೋಜ, ಪ್ರವೀಣ್ .ಜೆ. ಶೆಟ್ಟಿ, ಸುಲೋಚನ ಕೋಟ್ಯಾನ್, ದಿವಾಕರ ಶೆಟ್ಟಿ, ರವಿ ಶೆಟ್ಟಿ ಇನ್ನಾ, ಸುರೇಶ್ ಶೆಟ್ಟಿ ಅಬ್ಬಗ ದಾರಗ, ಕಸ್ತೂರಿ ಆಚಾರ್ಯ, ಸುರೇಶ್ ಮೂಲ್ಯ, ಅಜಿತ್ ಶೆಟ್ಟಿ ಸೂಡ, ಶೇಖ್ ಅಬ್ದುಲ್, ಶೋಭಾ, ಯೋಗೀಶ್ ಇನ್ನಾ, ಸಂತೋಷ್ ದೇವಾಡಿಗ, ಕಿಶೋರ್ ದೀಕ್ಷಿತ್ ದೇವಾಡಿಗ, ಪ್ರದೀಪ್ ಬೇಲಾಡಿ, ಸುದರ್ಶನ್ ಬಂಗೇರ, ಮನೀಶ್ ಪೂಜಾರಿ, ಅನೀಶ್ ಪೂಜಾರಿ, ಪ್ರಶಾಂತ್ ಕುಂದರ್, ಕೇಶವ ಸಾಲಿಯಾನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Trending