Connect with us

ಕಾರ್ಕಳ

ಪೆಹಲ್ಗಾಮ್ ಪೈಶಾಚಿಕ ಕೃತ್ಯಕ್ಕೆ ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ: ಉದಯ ಶೆಟ್ಟಿ ಮುನಿಯಾಲು

Published

on

ಕಾಶ್ಮೀರ ಪ್ರವಾಸಕ್ಕೆಂದು ತೆರಳಿದ್ದ ಪ್ರವಾಸಿಗರ ಮೇಲೆ ಏಪ್ರಿಲ್ 22 ರಂದು ಪೆಹಲ್ಗಾಮ್,ನಲ್ಲಿ ಪಾಕ್ ಪ್ರಾಯೋಜಿತ ಉಗ್ರಗಾಮಿಗಳು ಪೈಶಾಚಿಕ ದಾಳಿ ನಡೆಸಿ 26 ಅಮಾಯಕ ಭಾರತೀಯರನ್ನು ಹತ್ಯೆ ನಡೆಸಿದ ಕೃತ್ಯಕ್ಕೆ ಭಾರತೀಯ ‌ಸೇನಾಪಡೆಯು ತಕ್ಕ ಪ್ರತ್ಯುತ್ತರವನ್ನು ನೀಡಿರುವುದು ದೇಶವೇ ಹೆಮ್ಮೆ ಪಡುವಂತಾಗಿದೆ. ಶತ್ರು ರಾಷ್ಟ್ರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನಾಪಡೆಯು ನುಗ್ಗಿ ಉಗ್ರರ ನೆಲೆಗಳನ್ನು ದ್ವಂಸ ಮಾಡಿರುವುದು ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ, ಸದಾ ಭಯೋತ್ಪಾದಕ ಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಾ ಹೇಡಿತನ ಮೆರೆಯುತ್ತಿದ್ದ ಪಾಕಿಸ್ತಾನಕ್ಕೆ ನಮ್ಮ ಭಾರತೀಯ ಸೈನ್ಯ ದಿಟ್ಟತನದ ಉತ್ತರವನ್ನು ನೀಡಿರುವುದನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತೇವೆ ಎಂದು ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದ ಸರ್ವಬೌಮತೆಗೆ ದಕ್ಕೆ ತರುವ ವಿಶ್ವದ ಯಾವುದೇ ಶಕ್ತಿಗಳ ವಿರುದ್ದ ಭಾರತ ಸರ್ಕಾರ ಕೈಗೊಳ್ಳುವ ಕ್ರಮಗಳಿಗೆ ಕಾಂಗ್ರೆಸ್ ಪಕ್ಷ ತನ್ನ ಸಂಪೂರ್ಣ ಬೆಂಬಲವನ್ನು ಸೂಚಿಸುತ್ತದೆ. ಇನ್ನಾದರೂ ಭಯೋತ್ಪಾದನೆಯ ಮೂಲೋತ್ಪಾಟನೆ ಆಗಬೇಕು, ಭಾರತೀಯರೆಲ್ಲರೂ ಒಂದು ಎನ್ನುವ ಏಕಭಾವದಿಂದ ಬಾಳಿ ಬದುಕುವಂತಾಗಲು, ದೇಶದಲ್ಲಿ ಶಾಂತಿ ನೆಲೆಯಾಗಲು ಭಯೋತ್ಪಾದಕರ ಸರ್ವನಾಶ ಆಗಲೇ ಬೇಕು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ನಿಂತು ಭಾರತ ವಿರೋದಿಗಳನ್ನು ಹಿಮ್ಮೆಟ್ಟಿಸೋಣ ಭವ್ಯ ಭಾರತವನ್ನು ವಿಶ್ವದ ಮುಂದೆ ತಲೆ ಎತ್ತಿ ನಿಲ್ಲುವಂತಾಗಲು ಭಾರತೀಯರೆಲ್ಲರೂ ಒಂದಾಗಿ ಶ್ರಮಿಸೋಣ, ನಮ್ಮ ದೇಶದ ಸೈನ್ಯಕ್ಕೆ ಸ್ಪೂರ್ತಿ ತುಂಬೋಣ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Trending