Connect with us

ಕಾರ್ಕಳ

ಸೀತಾನದಿಗೆ ಚಾರಾ ಬಳಿ ರಾಜ್ಯ ಸರ್ಕಾರದ ಅನುದಾನದಿಂದ ನಿರ್ಮಾಣವಾದ ಕಿಂಡಿ ಅಣೆಕಟ್ಟು: ಉದಯ ಶೆಟ್ಟಿ ಮುನಿಯಾಲು ನೇತೃತ್ವದಲ್ಲಿ ಬಾಗಿನ ಅರ್ಪಣೆ

Published

on

ರಾಜ್ಯ ಸರ್ಕಾರದ ಸಣ್ಣ ನೀರಾವರಿ ಇಲಾಖೆಯಿಂದ ಹೆಬ್ರಿ ತಾಲೂಕಿನ ಚಾರ ನವೋದಯ ವಿದ್ಯಾಸಂಸ್ಥೆಯ ಬಳಿ ಸೀತಾನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಸೇತುವೆ ಸಹಿತ  ಕಿಂಡಿ ಅಣೆಕಟ್ಟುವಿಗೆ ಚಾರಾ ಮತ್ತು ಕುಚ್ಚೂರು ಬೆಳಂಜೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಹಾಗೂ ರೈತ ಸಂಘದ ವತಿಯಿಂದ  ಬಾಗಿನ ಅರ್ಪಣೆ ಕಾರ್ಯಕ್ರಮವು ನಡೆಯಿತು.  

ಕಾರ್ಯಕ್ರಮದಲ್ಲಿ  ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾದ್ಯಕ್ಷರಾದ ಉದಯ ಶೆಟ್ಟಿ ಮುನಿಯಾಲು ಭಾಗವಹಿಸಿ ಮಾತನಾಡಿ ಕೃಷಿ ಕಾರ್ಯಗಳಿಗೆ ತುಂಬಾ ಅಗತ್ಯವಿದ್ದ  ಈ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಚಾರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಚಾರ, ಕುಚ್ಚೂರು ಬೆಳಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ನಾಯಕ್, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಉದ್ಯಮಿ ಪ್ರವೀಣ್ ಬಲ್ಲಾಳ್,  ಪ್ರಚಾರ ಸಮಿತಿ ಅಧ್ಯಕ್ಷರಾದ ನವೀನ್ ಅಡ್ಯಂತಾಯ, ಕಿರಣ್ ತೋಳಾರ್, ಕುಚ್ಚೂರು ಬೆಳಂಜೆ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸನತ್ ಶೆಟ್ಟಿ, ಚಾರಾ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಮನಾ ಅಡ್ಯಂತಾಯ, ಬ್ಲಾಕ್ ವಕ್ತಾರ ನಿತೀಶ್ S.P, ಕರುಣಾಕರ ಶೆಟ್ಟಿ ಬೂತಗುಂಡಿ, ಮಹೇಶ್ ಶೆಟ್ಟಿ ಬಾದ್ಲು, ಮಹೇಶ್ ಶೆಟ್ಟಿ ಕುಚ್ಚೂರು, ಇಂಟಕ್,ನ ಮಿಥುನ್ ಶೆಟ್ಟಿ, ಪ್ರಸನ್ನ ಶೆಟ್ಟಿ ಮುನಿಯಾಲು, ನಿಲೇಶ್ ಪೂಜಾರಿ, ಪ್ರವೀಣ್ ಸೂಡ, ಜನಾರ್ದನ ಹೆಚ್ ಮುಂತಾದವರು ಉಪಸ್ಥಿತರಿದ್ದರು.

Advertisement

Trending