Connect with us

ಕಾರ್ಕಳ

ಕಾರ್ಕಳಕ್ಕೆ ಮೊಟ್ಟ ಮೊದಲ ಐಎಎಸ್ ಸಾಧನೆ: ಕಾರ್ಕಳದ ಶೌಖತ್ ಅಜೀಮ್ ಅವರಿಗೆ ಐಎಎಸ್ 345 ನೆ ರ್ಯಾಂಕ್

Published

on

2024 ನೇ ಸಾಲಿನ ಲೋಕಸೇವಾ ಆಯೋಗದ (ಯುಪಿಎಸ್ಸಿ) ಪರೀಕ್ಷೆಯಲ್ಲಿ 345 ನೆ ರ್ಯಾಂಕ್ ಪಡೆಯುವ ಮೂಲಕ ಕಾರ್ಕಳದ ಮೊಟ್ಟ ಮೊದಲ ಐಎಎಸ್ ಉತ್ತೀರ್ಣರಾದ ಕೀರ್ತಿಗೆ “ಶೌಖತ್ ಅಜೀಮ್” ಪಾತ್ರರಾಗಿದ್ದಾರೆ. 9 ನೇ ಬಾರಿಗೆ ಯುಪಿಎಸ್ಸಿ ಪರೀಕ್ಷೆ ಬರೆಯುವ ಮೂಲಕ 345 ಅಂಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇವರು ಕಾರ್ಕಳ ಸಾಲ್ಮರದ ಶೇಖ್ ಅಬ್ದುಲ್ಲಾ ಮತ್ತು ಮೈಮುನಾ ದಂಪತಿಗಳ ಸುಪುತ್ರರಾಗಿದ್ದು 2022 ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಸ್ತುತ ರಕ್ಷಣಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ತಂದೆ ಶೇಖ್ ಅಬ್ದುಲ್ಲಾ ಲಾರಿ ಚಾಲಕರಾಗಿ ದುಡಿಯುತ್ತಿದ್ದು ಸಾಧನೆಗೆ ಯಾವುದೂ ಅಡ್ಡಿಯಲ್ಲ ಎನ್ನುವುದನ್ನು ಶೌಖತ್ ಅಜೀಮ್ ಸಾಧಿಸಿ ತೋರಿಸಿದ್ದಾರೆ.

Advertisement

Trending