Connect with us

ಕಾರ್ಕಳ

ಉದಯ ಎಸ್‌ ಕೋಟ್ಯಾನ್ ಉಚ್ಚಾಟನೆ ಬೆನ್ನಲ್ಲೆ ಬಿಜೆಪಿ ಗ್ರಾಮ ಪಂಚಾಯತ್ ಸದಸ್ಯರಿಂದ ರಾಜೀ ನಾಮೆ ಪರ್ವ

Published

on

ಕಾರ್ಕಳ: ಕಾರ್ಕಳ ಬಿಜೆಪಿಯ ಪ್ರಭಾವಿ ನಾಯಕ ಎರಡು ಅವಧಿಯ ಜಿಲ್ಲಾ ಪಂಚಾಯತ ಸದಸ್ಯ, ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಉದಯ.ಎಸ್.ಕೋಟ್ಯಾನ್ ಅವರನ್ನು ಉಡುಪಿ ಜಿಲ್ಲಾ ಬಿಜೆಪಿ ಉಚ್ಚಾಟಿಸಿದ ಬೆನ್ನಲ್ಲಿಯೇ ಇರ್ವತ್ತೂರು ಗ್ರಾಮ ಪಂಚಾಯತಿನ 6 ಬಿಜೆಪಿ ಬೆಂಬಲಿತ ಸದಸ್ಯರು ತಮ್ಮ ಪಂಚಾಯತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಇರ್ವತ್ತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ದೀಪಾ ಶ್ರೀನಾಥ್, ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಶೇಖರ್ ಅಂಚನ್, ಅನಿತಾ ಕುಲಾಲ್, ಲಲಿತಾ ನಾಯ್ಕ, ಕವಿತಾ ಶಂಕರ್ ಒಟ್ಟು 6 ಜನ ಸದಸ್ಯರುಗಳು ವೈಯುಕ್ತಿಕ ಕಾರಣ ನೀಡಿ ತಮ್ಮ ಸದಸ್ಯ ಸ್ಥಾನಕ್ಕೆ ರಾಜಿನಾಮೆ ‌ನೀಡಿದ್ದಾರೆ.

ಉದಯ.ಎಸ್‌‌.ಕೋಟ್ಯಾನ್ ಅವರನ್ನು ಉಚ್ಚಾಟಿಸಿದ ಪಕ್ಷದ ಕ್ರಮದಿಂದ ತಮಗೆ ಬೇಸರವಾಗಿದೆ, ಹಾಗಾಗಿ ನಾವು ಸದಸ್ಯ ಸ್ಥಾನಕ್ಕೆ ರಾಜಿನಾಮೆ ‌ನೀಡುತ್ತಿದ್ದೇವೆ ಎಂದು ಮಾದ್ಯಮಗಳಿಗೆ ತಿಳಿಸಿದ್ದಾರೆ.

Advertisement

Trending