Connect with us

ಕಾರ್ಕಳ

ವಿಧಾನ ಮಂಡಲ ತಲುಪಿದ ಇನ್ನಾ ರೈತ ಪರ ಹೋರಾಟ: ಶಾಸಕ ಮಂಜುನಾಥ ಭಂಡಾರಿ ದ್ವನಿಗೆ ಉದಯ ಶೆಟ್ಟಿ ಮುನಿಯಾಲು ಸಂತಸ

Published

on

ಇನ್ನಾ 400 ಕೆ ವಿ ವಿದ್ಯುತ್ ಪವರ್ ಲೈನ್ ಸಮಸ್ಯೆ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ವಿಧಾನ ಮಂಡಲದಲ್ಲಿ ಧ್ವನಿ ಎತ್ತಿದ್ದಾರೆ.

ದಿನಾಂಕ 12.12.2024ರಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿ ಅವರು ನಂದಿಕೂರು ಕಾಸರಗೋಡು ವಿದ್ಯುತ್ ಲೈನ್ ಕಾಮಗಾರಿಯ ಅವೈಜ್ಞಾನಿಕ ಯೋಜನೆ ಕುರಿತಂತೆ ಹಾಗೂ ಇದರಿಂದ ರೈತರಿಗೆ ಆಗುವ ಅನಾನುಕೂಲವನ್ನು ವಿವರಿಸಿದರು.

ಕೂಡಲೇ ಟವರ್ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಿ ವೈಜ್ಞಾನಿಕವಾಗಿ ನೆಲದಡಿಯಲ್ಲಿ ವಿದ್ಯುತ್ ಲೈನ್ ನಿರ್ಮಾಣ ಮಾಡುವ ಕುರಿತಂತೆ ಶೂನ್ಯ ವೇಳೆಯಲ್ಲಿ ಇಂಧನ ಸಚಿವರನ್ನು ಒತ್ತಾಯಿಸಿದರು.

ಇನ್ನಾ ಗ್ರಾಮದಲ್ಲಿ ಟವರ್ ನಿರ್ಮಾಣ ವಿರೋಧಿ ಹೋರಾಟ ಸಮಿತಿ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಾಸಕರಾದ ಮಂಜುನಾಥ ಭಂಡಾರಿಯವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾ ನಿರತ ಇನ್ನಾ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿರುವುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

ಉದಯ ಶೆಟ್ಟಿ ಸಂತಸ : ವಿಧಾನ ಪರಿಷತ್ ನಲ್ಲಿ ಇಂದು ಮಂಜುನಾಥ ಭಂಡಾರಿಯವರು ವಿದ್ಯುತ್ ಪವರ್ ಲೈನ್ ಬಗ್ಗೆ ಮಾಡಿರುವ ಪ್ರಸ್ತಾಪ
ಇನ್ನಾದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಸಿಕ್ಕ ಮೊದಲ ಜಯ ಎಂದು ತಿಳಿಸಿದ್ದಾರೆ.

ಈ ಯೋಜನೆಯನ್ನು ವಿರೋಧಿಸಿ ಅಹೋ ರಾತ್ರಿ ಹೋರಾಟವನ್ನು ರೈತರೊಂದಿಗೆ ಸೇರಿ ಮಾಡಿದ್ದೆವು. ಈ ಹೋರಾಟಕ್ಕೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರು ಮತ್ತಷ್ಟು ಬಲ ನೀಡಿರುವುದು ಹೋರಾಟಗಾರರಿಗೆ ಸಿಕ್ಕ ಮೊದಲ ಜಯ ಎಂದು ಹೇಳಿದ್ದಾರೆ

Advertisement

Trending