Connect with us

ಕಾರ್ಕಳ

ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ) ಬೋಳ ಇದರ ಬೆಳ್ಳಿಹಬ್ಬ ಸಂಭ್ರಮಾಚರಣಾ ಸಮಿತಿ ರಚನೆ, ಪದಾಧಿಕಾರಿಗಳ ಆಯ್ಕೆ

Published

on

Oplus_131072

ಯಕ್ಷಾಕ್ಷರ ಮತ್ತು ಗ್ರಾಮೀಣಭಿವೃದ್ಧಿ ಸಂಸ್ಥೆ ( ರಿ.)ಬೋಳ ಇದರ
ಬೆಳ್ಳಿಹಬ್ಬ (25 ನೆ ವರ್ಷ) ಸಂಭ್ರಮಾಚರಣೆಯ ತಯಾರಿಯ ಪೂರ್ವಭಾವಿ ಸಮಾಲೋಚನಾ ಸಭೆಯು ಸಂಸ್ಥೆಯ ಅಧ್ಯಕ್ಷರು, ಸಂಚಾಲಕರು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ವಂಜಾರಕಟ್ಟೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಯಿತು.

ಸಂಸ್ಥಯ ಸಂಚಾಲಕರಾದ ಸುಧಾಕರ ಆಚಾರ್ಯ ಬೋಳ ಸಭೆಯಲ್ಲಿ ಮಾತನಾಡಿ 25 ವರ್ಷಗಳಿಂದ ಯಕ್ಷಾಕ್ಷರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಹಲವಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಾ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುತ್ತಾ ಬಂದಿದೆ. ಯಕ್ಷಗಾನ ಕಲೆಯ ಮೇಲೆ ಅಪರಿಮಿತ ಅಭಿಮಾನವನ್ನು ಉಳ್ಳವರು ಕಟ್ಟಿ ಬೆಳೆಸಿದ ಸಂಸ್ಥೆಯಾಗಿರುವ ಯಕ್ಷಾಕ್ಷರ ಮತ್ತು ಗ್ರಾಮೀಣಾಭಿವೃದ್ಧಿ (ರಿ) ಸಂಸ್ಥೆಯು ಬೆಳವಣಿಗೆಗೆ ಸ್ಥಳೀಯ ಎಲ್ಲಾ ಕಲಾಪೋಷಕರ ಸಹಕಾರ ಪ್ರೋತ್ಸಾಹವನ್ನು ಸ್ಮರಿಸುತ್ತೇವೆ ಅದೇ ರೀತಿ ಜನವರಿ ತಿಂಗಳಿನಿಂದ ವರ್ಷ ಪೂರ್ತಿ ನಡೆಯಲಿರುವ ಬೆಳ್ಳುಹಬ್ಬ ಸಂಭ್ರಮಾಚರಣೆಯ ವಿವಿಧ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇವೆ ಎಂದರು.

ಸಭೆಯಲ್ಲಿ ಬೆಳ್ಳಿಹಬ್ಬ ಸಂಭ್ರಮಾಚರಣೆಯ ಸಲುವಾಗಿ ಸಮಿತಿಯ ರಚನೆ ಹಾಗೂ ವಿವಿಧ ಉಪ ಸಮಿತಿಗಳ ರಚನೆ ಮತ್ತು ಪದಾಧಿಕಾರಿಗಳ ಜವಾಬ್ದಾರಿ ಹಂಚಿಕೆಯು ನಡೆಯಿತು.

ಬೆಳ್ಳಿಹಬ್ಬದ ಸಂಭ್ರಮಾಚರಣೆ ಸಮಿತಿಯನ್ನು ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕರಾದ ಜಗದೀಶ್ ಆಚಾರ್ ವಂಜಾರಕಟ್ಟೆ , ಗೌರವಧ್ಯಕ್ಷರಾಗಿ ಶ್ರೀ ಉದಯ ಶೆಟ್ಟಿ ಮೂಡುಮನೆ, ಕಾರ್ಯದರ್ಶಿಯಾಗಿ
ಶ್ರೀ ಸುದರ್ಶನ್ ಬಂಗೇರ ವಂಜಾರಕಟ್ಟೆ, ಉಪಾಧ್ಯಕ್ಷರಾಗಿ ಶ್ರೀ ರೋನಾಲ್ಡ್ ಅಲ್ಫೋನ್ಸ ಇವರನ್ನು ಅರಿಸಲಾಯಿತು.

ಬೆಳ್ಳಿಹಬ್ಬದ ಉಪ ಸಮಿತಿಗಳಾದ ⁠ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸತೀಶ್ ಪೂಜಾರಿ ವಙಜಾರಕಟ್ಟೆ, ಹಾಗೂ ಗೌರವಾಧ್ಯಕ್ಷರಾಗಿ ಶಂಕರ್ ಡಿ ಶೆಟ್ಟಿ, ಸ್ಮರಣ ಸಂಚಿಕೆಯ ಅಧ್ಯಕ್ಷರಾಗಿ ಶ್ರೀಸತೀಶ್ ಪ್ರಭು ವಂಜಾರಕಟ್ಟೆ, ಗೌರವಾಧ್ಯಕ್ಷರಾಗಿ ವಿಜಯ್ ಶೆಟ್ಟಿ ಗುಡುಕಲ್ಲು, ಉಪಾಧ್ಯಕ್ಷರಾಗಿ ಶಿಕ್ಷಕಿ ಶ್ರೀಮತಿ ಸಂಗೀತ ಕುಲಾಲ್ ಹಾಗೂ ಪ್ರಧಾನ ಸಂಪಾದಕರಾಗಿ ಪ್ರದೀಪ್ ಬೇಲಾಡಿ ಹಾಗೂ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ದೀಪಕ್ ಆಚಾರ್ಯ ಇವರುಗಳು ಆಯ್ಕೆಯಾದರು.

ಸಂಸ್ಥೆಯ ಅಧ್ಯಕ್ಷರಾದ ಕೇಶವ ಆಚಾರ್ಯ ಬೋಳ ಇವರು ಸ್ವಾಗತಿಸಿ, ಕಾರ್ಯದರ್ಶಿ ಸುದರ್ಶನ್ ಬಂಗೇರ ಧನ್ಯವಾದವಿತ್ತರು.

Advertisement

Trending