Connect with us

ಕಾರ್ಕಳ

ಅಧ್ಯಕ್ಷ ಪಿಡಿಓ ವಿರುದ್ದವೇ ಕಚೇರಿ ಮುಂಭಾಗ ಧರಣಿ ಕುಳಿತ ಮಿಯ್ಯಾರು ಪಂಚಾಯತ್ ಸದಸ್ಯರು

Published

on

ಪಂಚಾಯತಿ ಅಧ್ಯಕ್ಷ ಮತ್ತು ಪಿಡಿಒ ಅವರೇ ಅಕ್ರಮ ಮರಳುಗಾರಿಕೆಯಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಗ್ರಾಮ ಪಂಚಾಯತ್ ಸದಸ್ಯರೇ ಪಂಚಾಯತ್ ಆಫೀಸ್ ಮುಂದೆ ಪ್ರತಿಭಟನೆಗೆ ಕುಳಿತ ಘಟನೆ ಮಿಯ್ಯಾರು ಗ್ರಾಮ ಪಂಚಾಯತ್ ಆಫೀಸ್ ಮುಂದೆ ನಡೆದಿದೆ.

ಮಿಯ್ಯಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಿಡಿಓ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಮಿಯ್ಯಾರು ಗ್ರಾಮ ಪಂಚಾಯತಿ ಸದಸ್ಯ ಡೇನಿಯರ್ ರೇಂಜರ್ ನೇತೃತ್ವದಲ್ಲಿ ಗ್ರಾಮ ಪಂಚಾಯತಿನ ಮುಂಭಾಗ ಪ್ರತಿಭಟನೆ ನಡೆಯಿತು.

ರಾಮೇರ್ ಗುತ್ತು ಹೊಳೆಯಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಕಂದಾಯ ಅಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಈ ನಡುವೆ ಅಧ್ಯಕ್ಷರು ಮತ್ತು ಪಿಡಿಒ ಹಣದ ಬೇಡಿಕೆ ಇಟ್ಟಿದ್ದು, ಪಿಡಿಒ ಮೂಲಕ 15 ಸಾವಿರ ಹಣ ನೀಡಿರುವ ಮಾಹಿತಿ ಲಭ್ಯವಾಗಿದೆ ಎಂದು ಆರೋಪಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಕಳೆದ ಒಂದು ವರ್ಷದಿಂದ ಹೊಂದಾಣಿಕೆ ಮೂಲಕ ಅಕ್ರಮ ಮರಳುಗಾರಿಕೆ ಜೊತೆಗೆ ಲಂಚದ ಬೇಡಿಕೆಗಳ ಸುದ್ದಿಯಾಗಿದ್ದು ಈ ಕುರಿತಂತೆ ಗ್ರಾಮ ಪಂಚಾಯತಿನಲ್ಲಿ ಡಿಸೆಂಬರ್ 17ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದಾಗ ಸಮರ್ಪಕ ಉತ್ತರ ಬಾರದ ಹಿನ್ನೆಲೆಯಲ್ಲಿ ಈ ಪ್ರತಿಭಟನೆಯ ಮೂಲಕ ಸತ್ಯಾಂಶವನ್ನು ಬಹಿರಂಗಗೊಳಿಸುವಂತೆ ಆಗ್ರಹಿಸಲಾಯಿತು.

ಅಕ್ರಮ ಮರಳುಗಾರಿಕೆಯಿಂದ ಸರ್ಕಾರಕ್ಕೆ ಆಗಿರುವ ನಷ್ಟವನ್ನು ಅಧ್ಯಕ್ಷರು ಹಾಗೂ ಪಿಡಿಒ ಭರಿಸುವಂತೆ ಅಕ್ರಮವೆಸಗಿದ ಪಿಡಿಒ ಅವರನ್ನು ತಕ್ಷಣ ಅಮಾನತುಗೊಳಿಸಿ ಅಧ್ಯಕ್ಷರ ಸದಸ್ಯತನವನ್ನು ರದ್ದುಗೊಳಿಸುವಂತೆ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಮಾಡಲಾಯಿತು. ಪ್ರತಿಭಟನೆಯಲ್ಲಿ ಸುಕುಮಾರ್ ಇಂದಿರಾ ಹಾಗೂ ಲೇಡಿ ಉಪಸ್ಥಿತರಿದ್ದರು.

Advertisement

Trending