Connect with us

ಕಾರ್ಕಳ

ಕಾರ್ಕಳ ಶ್ರುತಿ.ಕೆ. ಶಿಂಧೆ ಯವರಿಗೆ ಎಂ.ಎ ಮ್ಯೂಸಿಕ್ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಹಾಗೂ ಚಿನ್ನದ ಪದಕ

Published

on

ಕಾರ್ಕಳ ಶ್ರುತಿ.ಕೆ. ಶಿಂಧೆ ಯವರಿಗೆ ಎಂ.ಎ ಮ್ಯೂಸಿಕ್ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಪಡೆದು ಚಿನ್ನದ ಪದಕ ಲಭಿಸಿರುತ್ತದೆ.

ಕಲಬುರ್ಗಿಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ನಡೆದಂತಹ 6 ನೇ ವಾರ್ಷಿಕ ಘಟಕೋತ್ಸವ ಕಾರ್ಯಕ್ರಮದಲ್ಲಿ ಎರಡು ವರ್ಷಗಳ ಸ್ನಾತಕೋತರ ಪದವಿ ಎಂ.ಎ ಮ್ಯೂಸಿಕ್ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಪಡೆದು ಚಿನ್ನದ ಪದಕವನ್ನು ಶ್ರುತಿ.ಕೆ.ಶಿಂಧೆ ಇವರು ಪಡೆದಿರುತ್ತಾರೆ.

ಬಹುಮುಖ ಪ್ರತಿಭೆಯ ಶ್ರುತಿ ಪ್ರೌಢಶಾಲಾ ಪರೀಕ್ಷೆ ಮಂಡಳಿಯು ನಡೆಸುವ ಸಂಗೀತ, ತಾಳವಾದ್ಯ ಪ್ರಾಯೋಗಿಕ ಪರೀಕ್ಷೆಗಳಿಗೆ ತೀರ್ಪುಗಾರರಾಗಿ ಮಂಡಳಿಯ ಸದಸ್ಯತ್ವ ಜೂನಿಯರ್,ಸೀನಿಯರ್ ವಿದ್ವತ್ ಪೂರ್ವ, ವಿದ್ವತ್ ಅಂತಿಮ ಹಾಡುಗಾರಿಕೆ ಪರೀಕ್ಷೆಯಲ್ಲಿ 91% ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.

ಇವರು ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಶಾಲೆಯಲ್ಲಿ ಸಂಗೀತ ಶಿಕ್ಷಕರಾಗಿರುವ ಕೃಷ್ಣಪ್ಪ ಹಾಗೂ ಸುಶೀಲಾ ಇವರ ಪುತ್ರಿಯಾಗಿದ್ದಾರೆ.
ಪ್ರಸ್ತುತ ಇವರು ಆಳ್ವಾಸ್ ಪ್ರೌಢಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Advertisement

Trending