Connect with us

ಕಾರ್ಕಳ

ಬೋಳ ಗ್ರಾಮದ ಹಲವೆಡೆ ಉದಯ ಶೆಟ್ಟಿ ಮುನಿಯಾಲು ವತಿಯಿಂದ ರಸ್ತೆ ದುರಸ್ತಿ: ಗ್ರಾಮಸ್ಥರಿಂದ ವ್ಯಾಪಕ ಪ್ರಶಂಸೆ

Published

on

ಬೋಳ ಗ್ರಾಮದ ಕೆರೆಕೋಡಿ, ಹೂಹಿತ್ಲು, ಪಂಚಾಯತ್ ಬಳಿ, ಕೆಂಪುಜಾರ್ 5 cents, ಮುಗಿಲಿ, ಪೊಯ್ಯೆ, ಬೋಳ ಪದವು, ಪಾಲಿಂಗೇರಿ, ಪಂಚಾಯತ್ ಬಳಿ, ಮುಂತಾದೆಡೆ ರಸ್ತೆ ಸೂಕ್ತ ದುರಸ್ತಿ ಕಾಣದೆ ಸಂಪೂರ್ಣ ಹದಗೆಟ್ಟಿದ್ದು ಗ್ರಾಮಸ್ಥರಿಗೆ ಸಂಚಾರಕ್ಕೆ ಅನಾನುಕೂಲವಾಗಿತ್ತು. ರಸ್ತೆ ದುರಸ್ತಿಯ ಕುರಿತು ಗ್ರಾಮಸ್ಥರು ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರಲ್ಲಿ ಬೋಳ ಗ್ರಾಮಸ್ಥರು ಮನವಿ ಮಾಡಿದ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಿನಂತಿಯ ಮೇರೆಗೆ ಉದಯ ಶೆಟ್ಟಿ ಮುನಿಯಾಲು, ರವರು ತಮ್ಮ ಸ್ವಂತ ಖರ್ಚಿನಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅವರದೇ ಸಂಸ್ಥೆಯ ಮೂಲಕ ಎರಡು ವಾರಗಳಿಂದ ನಿರಂತರವಾಗಿ ರಸ್ತೆಯನ್ನು ದುರಸ್ತಿ ಕಾಮಗಾರಿ ನಡೆಸಿಕೊಡುತ್ತಿದ್ದಾರೆ.

ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಗ್ರಾಮಸ್ಥರ ಕಷ್ಟಕ್ಕೆ ಸ್ಪಂದಿಸಿ ಜನರ ಸುಗಮ ಸಂಚಾರಕ್ಕೆ ರಸ್ತೆಯನ್ನು ದುರಸ್ತಿಗೊಳಿಸಿದ ಉದಯ ಶೆಟ್ಟಿ ಮುನಿಯಾಲು ಅವರ ಈ ಕಾರ್ಯಗಳಿಗೆ ಗ್ರಾಮಸ್ಥರಿಂದ ವ್ಯಾಪಾಕ ಪ್ರಶಂಸೆಗೆ ಜಾರಣವಾಗಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥವಾಗಿ ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವ ಇಂತಹ ಜನನಾಯಕರ ಅನಿವಾರ್ಯತೆಯಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

Advertisement

Trending