ಕಾರ್ಕಳ
ಕಾರ್ಲೋತ್ಸವದ ತಡೆಗೆ ಶತಪ್ರಯತ್ನ ಪಟ್ಟು ಮರ್ಯಾದೆ ಕಳೆದುಕೊಂಡವರಿಂದ ನೈತಿಕತೆಯ ಪಾಠದ ಅಗತ್ಯವಿಲ್ಲ: ಶುಭದ್ ರಾವ್

ಮುಂಡ್ಳಿ ಪರಿಸರದಲ್ಲಿ ಆಯೋಜಿಸಿದ್ದ ಯಕ್ಷಗಾನ ಪ್ರದರ್ಶನಕ್ಕೆ ದ್ವನಿವರ್ಧಕದ ಬಳಕೆಗೆ ಅನುಮತಿ ಪಡೆದಿಲ್ಲ ಎನ್ನುವ ಕಾರಣಕ್ಕೆ ಪೋಲೀಸರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಘಟನೆಗೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ, ವೈಯಕ್ತಿಕ ಮನಸ್ಥಾಪದ ಕಾರಣಕ್ಕೆ ಯಾರೋ ನೀಡಿದ ದೂರಿಗೆ ಪಕ್ಷ ಹೊಣೆಯಾಗುದಿಲ್ಲ ಅದ್ದರಿಂದ ಈ ಬಗ್ಗೆ ಕಾಂಗ್ರೆಸ್ ಪಕ್ಷದ ಮೇಲೆ ಶಾಸಕರು ಮತ್ತು ಕ್ಷೇತ್ರಾದ್ಯಕ್ಷರು ಮಾಡಿದ ಮಿತ್ಯ ಆರೋಪವನ್ನು ಸಹಿಸಲು ಸಾದ್ಯವಿಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಶುಭದರಾವ್ ತಿಳಿಸಿದ್ದಾರೆ.
ಯಕ್ಷಗಾನ ಕರಾವಳಿಯ ಗಂಡು ಕಲೆ, ನಮ್ಮ ಸಂಸ್ಕೃತಿಯ ಪ್ರತೀಕ, ಅದಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ, ಅದರ ಪ್ರದರ್ಶನವನ್ನು ಮತ್ತು ಕಾಲವಿದರನ್ನು ಕಾಂಗ್ರೆಸ್ ನಿರಂತರ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ, ಅದರ ಪ್ರದರ್ಶನವನ್ನು ಯಾರು ತಡೆದರೂ ನಮ್ಮ ಆಕ್ಷೇಪವಿದೆ ಒಂದು ವೇಳೆ ಕಾಂಗ್ರೆಸ್ ನಾಯಕ ತಡೆದಿದ್ದರೆ ಯಾರೆಂದು ದಾಖಲೆ ಸಹಿತ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಆದರೆ ಈ ಘಟನೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎನ್ನುವುದು ಶಾಸಕರ ಮತ್ತು ಕ್ಷೇತ್ರಾದ್ಯಕ್ಷರ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ, ತಡೆಯೊಡ್ಡುವ ಚಾಳಿ ಕಾಂಗ್ರೆಸಿಗಿಲ್ಲ ಅದು ಬಿಜೆಪಿಯ ಸಂಸ್ಕೃತಿ ಎನ್ನುವುದು ಇತೀಚಿಗೆ ನಡೆದ ಕಾರ್ಲೋತ್ಸವದ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಕಾರ್ಲೋತ್ಸವದ ಕಾರ್ಯಕ್ರಮಕ್ಕೆ ತಡೆ ಮಾಡುವ ಪ್ರಯತ್ನ ಪಟ್ಟು ಕೈ ಸುಟ್ಟುಕೊಂಡಿರುವ ಬಿಜೆಪಿ ನಾಯಕರ ಮಾನ ಬೀದಿ ಪಾಲಾಗಿದೆ, ಎರಡನೇ ಸಾಲಿನ ನಾಯಕರು ಬೆಳೆದರೆ ನಮಗೆ ಕಷ್ಟ ಎಂದು ತನ್ನ ಪಕ್ಷ ಅಧಿಕಾರಕ್ಕೆ ಬರಲು ಹಗಲು ರಾತ್ರಿ ದುಡಿದ ಪಕ್ಷದ ಹಿರಿಯ, ಕಿರಿಯ ನಾಯಕರು ಮತ್ತು ಸಾರ್ವಜನಿಕರ ಸಹಕಾರದಲ್ಲಿ ಅಯೋಜಿಸಿದ್ದ ಕಾರ್ಲೋತ್ಸವಕ್ಕೆ ಎಷ್ಟೆಲ್ಲಾ ತಡೆ ನೀಡಿದ್ದರು ಎನ್ನುವುದು ಎಲ್ಲರಿಗೆ ತಿಳಿದಿರುವ ವಿಚಾರ ಈ ಕಾರ್ಯಕ್ರಮಕ್ಕೆ ತಡೆಯೊಡ್ಡುವ ಮೂಲಕ ಮನೆಯವರನ್ನೆ ಪರಸ್ಪರ ಎತ್ತಿ ಕಟ್ಟುವ ಪ್ರಯತ್ನ ಮಾಡಿರುವುದೂ ಗುಟ್ಟಾಗಿ ಉಳಿದಿಲ್ಲ ಎಂದರು.
ಕಾರ್ಯಕ್ರಮ ಯಾವುದೇ ಆಗಿರಲಿ, ಯಾರೇ ಮಾಡಿರಲಿ ಅದರ ಹಿಂದೆ ಅನೇಕರ ಶ್ರಮವಿದೆ ಅದನ್ನು ಅರ್ಧಕ್ಕೆ ನಿಲ್ಲಿಸುವ ಪ್ರಯತ್ನ ಶತ್ರುಗಳು ಮಾಡಬಾರದು ಆದರೆ ಬಿಜೆಪಿಯ ಕೆಲ ನಾಯಕರಿಂದ ಅದಕ್ಕೆ ತಡೆಯಾದಾಗ ಕಾಂಗ್ರೆಸ್ ಆಯೋಜಕರ ಬೆನ್ನಿಗೆ ನಿಂತು ಕಾರ್ಯಕ್ರಮ ಸಾಂಗವಾಗಿ ನೆರವೇರಲು ಸಹಕಾರ ಮಾಡಿದೆ ಎನ್ನುವುದನ್ನು ಶಾಸಕರು ಮತ್ತು ಕ್ಷೇತ್ರದ್ಯಾಕ್ಷರು ನೆನಪು ಮಾಡಿಕೊಳ್ಳಲಿ ಎಂದು ಶುಭದರಾವ್ ತಿಳಿಸಿದ್ದಾರೆ
-
ವಿದೇಶ6 months ago
ಇಸ್ರೇಲ್ ದಾಳಿ: ಉತ್ತರ ಗಾಜಾದಲ್ಲಿ ವಸತಿ ಕಟ್ಟಡ ಧ್ವಂಸ; ಮಕ್ಕಳು, ಮಹಿಳೆಯರು ಸೇರಿ 93 ಪ್ಯಾಲೆಸ್ತೀನಿಯರು ಸಾವು!
-
ದೇಶ6 months ago
ಅದಾನಿ ಸಮೂಹ, ಪ್ರಮುಖ ನಿಯಂತ್ರಕ ಸಂಸ್ಥೆಗಳು, ಬಿಜೆಪಿ ನಡುವೆ ‘ಅಪಾಯಕಾರಿ ನಂಟು’: ಕಾಂಗ್ರೆಸ್ ಆರೋಪ
-
Business4 months ago
ನ್ಯೂಸ್ ಕಾರ್ಲ ವೆಬ್ ನ್ಯೂಸ್ ವರದಿ ಸುಳ್ಳು ನಾನು ನನ್ನ ಹೇಳಿಕೆಗೆ ಬದ್ದ, ಪ್ರತಿಭಟನಾಕಾರರ ವಿರುದ್ದ ಮಾತನಾಡುವ ರೇಷ್ಮಾ ಶೆಟ್ಟಿ ಅದಾನಿಯ ವಕ್ತಾರರೇ..? ಸರಿತಾ ಶೆಟ್ಟಿ ಇನ್ನಾ ಪ್ರಶ್ನೆ
-
Business5 months ago
ರಾಷ್ಟ್ರೀಯ ಸಮಸ್ಯೆಯಾಗಿರುವ ನಕ್ಸಲ್ ಪಿಡುಗನ್ನು ಕೇವಲ ರಾಜ್ಯಕ್ಕೆ ಸೀಮಿತಗೊಳಿಸಿ ಮಾತನಾಡುವ ಸುನೀಲ್ ಕುಮಾರರದ್ದು ಬೌಧಿಕ ದಿವಾಳಿತನವಾಗಿದೆ: ಯೋಗೀಶ್ ಇನ್ನಾ
-
Business5 months ago
-
ಕಾರ್ಕಳ5 months ago
ಪಳ್ಳಿ ಕಣಂಜಾರು ಬೈಲೂರು ಮಾರ್ಗವಾಗಿ ಕಾರ್ಕಳಕ್ಕೆ ಸರ್ಕಾರಿ ಬಸ್ ಸೇವೆ ಆರಂಭ; ಮುನಿಯಾಲ್ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವ
-
ರಾಜ್ಯ6 months ago
ಹೊಂದಾಣಿಕೆ ರಾಜಕೀಯ ಮಾಡುವವರನ್ನು ಹೊರ ಹಾಕ್ತಿದ್ದೇವೆ: ವಿಜಯೇಂದ್ರ
-
ಕಾರ್ಕಳ6 months ago
ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಸಮಿತಿಗೆ ನೂತನ ಅದ್ಯಕ್ಷರ ಆಯ್ಕೆ