Connect with us

ಕಾರ್ಕಳ

ಸರ್ಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ; ‘ನ್ಯೂಸ್ ಕಾರ್ಕಳ’ ವೆಬ್ ನ್ಯೂಸ್ ವಿರುದ್ಧ ಕಾಂಗ್ರೆಸ್‌ನಿಂ‌ದ ಪೋಲಿಸ್ ಠಾಣೆಗೆ ದೂರು..!

Published

on

(ವರದಿ – ವಾಯ್ಸ್ ಆಫ್ ಕಾರ್ಲ)

ಕಾರ್ಕಳ: ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಪಂಚ ಗ್ಯಾರಂಟಿ ಯೋಜನೆಯನ್ನು ಅವಮಾನಿಸಿ ಸುದ್ದಿ ಪ್ರಕಟಿಸಿರುವ ‘ನ್ಯೂಸ್ ಕಾರ್ಕಳ’ ಎಂಬ ವೆಬ್ ಚಾನೆಲ್‌ನ ವಿರುದ್ಧ ಕ್ರಮಕ್ಕೆ ಅಗ್ರಹಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ನಿಯೋಗವು ಕಾರ್ಕಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿತು.

ನ್ಯೂಸ್ ಕಾರ್ಕಳ ವೆಬ್ ಪೊರ್ಟಲ್,ನ ಸಂಪಾದಕೀಯದಲ್ಲಿ ರಾಜ್ಯದ ಕೋಟ್ಯಾಂತರ ಜನರು ಫಲಾನುಭವಿಗಳಾಗಿರುವ ಗ್ಯಾರಂಟಿ ಯೋಜನೆಯನ್ನು ಹುಚ್ಚು ಯೋಜನೆ ಎಂದು ಟೀಕಿಸಿ ಗ್ಯಾರಂಟಿ ಯೋಜನೆಯ ಬಗ್ಗೆ ಅವಹೇಳನಕಾರಿಯಾಗಿ ಆಕ್ಷೇಪಾರ್ಹ ಪದ ಬಳಕೆಯನ್ನು ಮಾಡಿರುವುದರ ವಿರುದ್ಧ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನ್ಯೂಸ್ ಕಾರ್ಕಳ ವೆಬ್ ಪೋರ್ಟಲ್ ವಿರುದ್ದ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು.ಮುಂದೆ ಇಂತಹ ಅವಹೇಳನ ಸುದ್ದಿ ಪ್ರಕಟಿಸಿದರೆ ನ್ಯೂಸ್ ಚಾನಲ್ ಕಚೇರಿ ಮುಂಬಾಗದಲ್ಲೇ ಪ್ರತಿಭಟಿಸುವ ಎಚ್ಚರಿಕೆಯನ್ನು ನೀಡಿದರು.

ಗ್ಯಾರಂಟಿ ಯೋಜನೆಯ ವಿರುದ್ದ ಅಪಪ್ರಚಾರ ನಡೆಸುತ್ತಿರುವ ವೆಬ್ ನ್ಯೂಸ್ ಚಾನಲ್ ವಿರುದ್ದ ಅಸಮಾಧಾನಗೊಂಡ ಕಾಂಗ್ರೆಸ್ ಕಾರ್ಯಕರ್ತರು ನ್ಯೂಸ್ ಕಾರ್ಕಳ ವೆಬ್ ನ್ಯೂಸ್ ನ ಎಲ್ಲಾ ವಾಟ್ಸ್ಯಾಪ್ ಗ್ರೂಪ್,ಗಳಿಂದ ಹೊರ ಬಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಅವರ ನೇತೃತ್ವ ದಲ್ಲಿ ನೂರಾರು ಕಾರ್ಯಕರ್ತರು ನಗರ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಹಾಗೂ ಸಮಿತಿಯ ಸದಸ್ಯರು ಹಾಗೂ ಕೆ, ಎಮ್, ಎಫ್ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸೂರಜ್ ಶೆಟ್ಟಿ, ಮಲಿಕ್ ಅತ್ತೂರು, ಗ್ರಾಮೀಣ ಸಮಿತಿ ಅಧ್ಯಕ್ಷರಾದ ಸುಬೋದ್ ಶೆಟ್ಟಿ, ರುಕ್ಮಯ ಶೆಟ್ಟಿಗಾರ್, ಸಾಮಾಜಿಕ ಜಾಲತಾಣದ ಅದ್ಯಕ್ಷ ಸಂತೋಷ್ ದೇವಾಡಿಗ, ನಗರ ಅಧ್ಯಕ್ಷ ರಾದ ರಾಜೇಂದ್ರ ದೇವಾಡಿಗ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಬ್ಬೀರ್ ಮಿಯ್ಯಾರು, ಭೂ ನ್ಯಾಯ ಮಂಡಳಿಯ ಸದಸ್ಯ ಸುನಿಲ್ ಭಂಡಾರಿ, ಪುರಸಭಾ ಸದಸ್ಯ ವಿವೇಕಾನಂದ ಶೆಣೈ, ಪ್ರತಿಮಾ ರಾಣೆ, ಯುವ ಕಾಂಗ್ರೆಸ್ ಪ್ರದಾನ ಕಾರ್ಯ ದರ್ಶಿ ಮಂಜುನಾಥ್ ಜೋಗಿ, ಮಹಿಳಾ ಪದಾಧಿಕಾರಿಗಳಾದ ಶೋಭಾ ಪ್ರಸಾದ್, ಆಶಾ ಬೈಲೂರು, ಕಾಂತಿ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

Advertisement

Trending