Connect with us

ವಾಣಿಜ್ಯ

ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನಲ್ಲಿ 20 ಕೋಟಿ ಕ್ಲೈಂಟ್ ಅಕೌಂಟ್ಗಳ ಮೈಲಿಗಲ್ಲು; ಷೇರು ಮಾರುಕಟ್ಟೆಗೊಂದು ಹೊಸ ಗರಿ

Published

on

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಹೊಸ ಮೈಲಿಗಲ್ಲು ಮುಟ್ಟಿದೆ. ಎನ್​ಎಸ್​ಇನ ಒಟ್ಟು ಕ್ಲೈಂಟ್ ಅಕೌಂಟ್​ಗಳ ಸಂಖ್ಯೆ 20 ಕೋಟಿ ಮುಟ್ಟಿದೆ. ಕೇವಲ ಎಂಟು ತಿಂಗಳಲ್ಲಿ ಮೂರು ಕೋಟಿಗೂ ಅಧಿಕ ಖಾತೆಗಳು ಸ್ಥಾಪನೆಯಾಗಿವೆ. ಶೇ. 18ರಷ್ಟು ಎಸ್​ಎಸ್​ಇ ಡೀಮ್ಯಾಟ್ ಅಕೌಂಟ್​ಗಳು ಮಹಾರಾಷ್ಟ್ರದಿಂದಲೇ ಬಂದಿವೆ. ಮಹಾರಾಷ್ಟ್ರ, ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳ, ಈ ಐದು ರಾಜ್ಯಗಳಿಂದ ಅರ್ಧದಷ್ಟು ಕ್ಲೈಂಟ್ ಅಕೌಂಟ್​ಗಳು ರಚನೆ ಆಗಿವೆ.

ಮಹಾರಾಷ್ಟ್ರದಿಂದ 3.6 ಕೋಟಿ, ಉತ್ತರಪ್ರದೇಶದಿಂದ 2.2 ಕೋಟಿ, ಗುಜರಾತ್ 1.8 ಕೋಟಿ, ರಾಜಸ್ಥಾನ 1.2 ಕೋಟಿ, ಪಶ್ಚಿಮ ಬಂಗಾಳದಿಂದ 1.2 ಕೋಟಿಯಷ್ಟು ಕ್ಲೈಂಟ್ ಅಕೌಂಟ್ಗಳ ಸ್ಥಾಪನೆ ಆಗಿರುವುದು ತಿಳಿದುಬಂದಿದೆ.

Advertisement

Trending