Connect with us

ಉದ್ಯೋಗ

ಕಿರಿಯ ಪವರ್‌ಮ್ಯಾನ್ ಹಾಗೂ ಕಿರಿಯ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ, ಇಲ್ಲಿದೆ ಮಾಹಿತಿ

Published

on

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿ ಖಾಲಿ ಇರುವ ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್‌ಮ್ಯಾನ್ ಹಾಗೂ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಲಸ ಮಾಡಲು ಇಷ್ಟವಿಲ್ಲದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ* ಹುದ್ದೆ : ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್‌ಮ್ಯಾನ್* ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

* ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 2,975 ಹುದ್ದೆಗಳು* ಕಿರಿಯ ಸ್ಟೇಷನ್ ಪರಿಚಾರಕ : 433 ಹುದ್ದೆ* ಕಿರಿಯ ಪವರ್‌ಮ್ಯಾನ್ : 2542 ಹುದ್ದೆ* ವೇತನ : ಅಭ್ಯರ್ಥಿಗಳಿಗೆ 1ನೇ ವರ್ಷ ಮಾಸಿಕ ರೂ. 17,000, 2ನೇ ವರ್ಷ ಮಾಸಿಕ ರೂ. 19,000, 3ನೇ ವರ್ಷ ಮಾಸಿಕ ರೂ. 21,000 ರಂತೆ ಮಾಸಿಕ ವೇತನವಿರುತ್ತದೆ. ಮೂರು ವರ್ಷದ ತರಬೇತಿಯನ್ನು ತೃಪ್ತಿಕರವಾಗಿ ಪೂರೈಸಿದ ನಂತರ ಅಭ್ಯರ್ಥಿಗಳಿಗೆ ಮಾಸಿಕ ರೂ. 28,550 ರಿಂದ ರೂ. 63,000 ವೇತನವನ್ನು ನೀಡಲಾಗುತ್ತದೆ.

Advertisement

Trending