Connect with us

Politics

ಆನೆಗಿಂತಲೂ ಜೋರಾಗಿ ಘೀಳಿಡುತ್ತಿದ್ದವರು ಮೌನವಾಗಿದ್ದಾರೆ: ಪ್ರದೀಪ್ ಬೇಲಾಡಿ

Published

on

ಆನೆಗಿಂತಲೂ ಜೋರಾಗಿ ಘೀಳಿಡುತ್ತಿದ್ದವರು ಮೌನವಾಗಿದ್ದಾರೆ…!

ಲೋಕ ಕಲ್ಯಾಣಾರ್ಥವಾಗಿ ಯಾಗ ಮಾಡುವುದು ಕೇಳಿದ್ದೇವೆ, “ಲೋಕ ಸಮಸ್ತಾ ಸುಖಿನಃ ಭವಂತು” ಎನ್ನುವ ಮಾತನ್ನೂ ಕೇಳಿದ್ದೇವೆ. ಮನೆಯಲ್ಲಿ ನಮ್ಮ ಶ್ರೇಯಸ್ಸಿಗೆಂದು ನಮ್ಮ ಉದ್ದಾರಕ್ಕೆಂದು ಪೂಜೆ ಹೋಮ ಹವನ ಮಾಡಿಸುತ್ತೇವೆ, ಆದರೆ ಪೂರ್ಣಾಹುತಿಯ ಸಂದರ್ಭದಲ್ಲಿ ಅಥವಾ ಪ್ರಾರ್ಥನೆಯ ಸಂದರ್ಭದಲ್ಲಿ ಪುರೋಹಿತರು ಲೋಕದ ಸಕಲ ಜೀವ ರಾಶಿಗಳಿಗೂ ಒಳಿತನ್ನು ಮಾಡು ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾರೆ. ನಮ್ಮ ಮನೆಯ ಪೂಜೆಯಲ್ಲಿ ನಾವೇ ದುಡ್ಡು ಕೊಟ್ಟು ನಡೆಸಿದ ಪೂಜೆಯಲ್ಲಿ ನಮಗೆ ಮಾತ್ರಾ ಅಲ್ಲದೆ ಲೋಕದ ಸಕಲ ಜೀವರಾಶಿಗಳಿಗೂ ಒಳಿತನ್ನೆ ಮಾಡು ಎಂದು ಪ್ರಾರ್ಥಿಸುತ್ತೇವೆ..! ನಾವು ಮಾತ್ರವಲ್ಲದೇ ಭೂಮಿ ಮೇಲಿನ ಎಲ್ಲಾ ಜೀವರಾಶಿಗಳಿಗೂ ಬದುಕಲು ಹಕ್ಕಿದೆ ಎನ್ನುವ ಉದಾತ್ತಾ ಚಿಂತನೆ ಇದು.

ಇಂತಾ ಚಿಂತನೆಯಿಂದ ಬಂದ ನಮ್ಮ ನಡುವೆ ತೋಟಕ್ಕೆ ತೊಂದರೆ ಕೊಡುತ್ತೆ ಎಂದು ಆನೆಯನ್ನು ನಿರ್ದಯವಾಗಿ ಕೊಲ್ಲುತ್ತೇನೆ ಎಂದು ಅಧಿವೇಶನದಲ್ಲಿ ಹೇಳುವ ಶಾಸಕರೂ ಇದ್ದಾರೆ ಎನ್ನುವುದು ದುರಂತವಲ್ಲವೆ…?

ಕಾನೂನು ಸಂವಿಧಾನ ಆಚೆಗೆ ಇರಲಿ ಅದರ ಮೇಲೆ ಬಿಜೆಪಿಗರಿಗೆ ಎಳ್ಳಷ್ಟೂ ಗೌರವ ಇಲ್ಲ ಬಿಡಿ, ಆದರೆ ಇವರೇ ದಿನ ನಿತ್ಯ ಜನರಿಗೆ ಉಪದೇಶ ನೀಡುವ ಹಿಂದು ಧರ್ಮದ ಮೇಲೆಯೂ ನಂಬಿಕೆ ಇಲ್ಲವೆ…? ಮೊಸಳೆಯಿಂದ ಆನೆಯನ್ನು ರಕ್ಷಣೆ ಮಾಡಿದ ವಿಷ್ಣು ದೇವರ ಕಥೆಯು “ಗಜೇಂದ್ರ ಮೋಕ್ಷ” ಎಂದೇ ಪ್ರಸಿದ್ದಿ ಪಡೆದಿದೆ, ಆಸ್ತಿಕರು ಗಜೇಂದ್ರ ಮೋಕ್ಷ ಸ್ತೋತ್ರ ಪಠಣವನ್ನೂ ಭಕ್ತಿಯಿಂದ ನಡೆಸುತ್ತಾರೆ.

ಆನೆಯನ್ನು ಹಿಂದು ಧರ್ಮದಲ್ಲಿ ದೇವರೆಂದು ಪೂಜಿಸುತ್ತೇವೆ, ದೇವಸ್ಥಾನಗಳಲ್ಲಿ ಸಾಕಿ ಸಲಹಿ ದೇವರ ಹೆಸರಿಟ್ಟು ಖುಷಿ ಪಡುತ್ತೇವೆ, ಕರ್ನಾಟಕದ ಹಿರಿಮೆ ಮೈಸೂರು ದಸರಾದ ಅಂಬಾರಿ ಹೊರುವುದಕ್ಕೂ ಆನೆ ಬೇಕು. ದೇವಳದ ಸಾಕು ಆನೆ ಅಕಸ್ಮಾತ್ ಮೃತಪಟ್ಟರೆ ಸಾವಿರಾರು ಜನ ಕಣ್ಣೀರಿನ ವಿದಾಯ ಎಂದು ಮರುದಿನ ಪತ್ರಿಕೆಯಲ್ಲಿ ಓದುತ್ತೇವೆ, ಕಾರಣ ಜನರಿಗೆ ಆನೆಯ ಮೇಲಿರುವ ಭಕ್ತಿ ಗೌರವ ಶ್ರದ್ದೆ. ಜನರಿಗೆ ಆನೆಯ ಮೇಲಿನ ಗೌರವ ಇಂದು ನಿನ್ನೆಯದಲ್ಲ, ಪುರಾಣಗಳಿಂದ ಇತಿಹಾಸದಿಂದ ಈಗಿನ ಆಧುನಿಕ ಕಾಲದವರೆಗೂ ಗಜರಾಜ ಬಹುವಂದಿತನಾಗಿದ್ದಾನೆ.

ಆನೆಗಳ ಬಗ್ಗೆ ಜನ ಸಾಮಾನ್ಯರಿಗೆ ಇರುವ ಶ್ರದ್ದೆ , ಗೌರವ, ಮಾನವೀಯತೆ ಜನಪ್ರತಿನಿಧಿಯಾದ ಹರೀಶ್ ಪೂಂಜ ಅವರಿಗೆ ಇಲ್ಲ..! ಹೆಣ್ಣು ಮಗಳೊಬ್ಬಳ ಮೇಲೆ ಕೋಳಿ ಮೊಟ್ಟೆ ಎಸೆಯುವ ಮೂಲಕ ರಾಜಕೀಯ ಜೀವನ ಆರಂಭಿಸಿದ ಹರೀಶ್ ಪೂಂಜಾರಂತವರಿಗೆ ಆನೆಯ ಮೇಲೆ ಗೌರವ ಹುಟ್ಟಲು ಸಾಧ್ಯವೆ…? ಕಿಡಿಗೇಡಿತನ, ಪುಂಡಾಟ ನಡೆಸುತ್ತಿದ್ದವರು ಚುನಾವಣೆ ಗೆದ್ದು ವಿಧಾನಸೌಧದೊಳಗೆ ಹೋದ ಕೂಡಲೇ ಸುಧಾರಿಸಿಕೊಳ್ಳುತ್ತಾರೆ ಎಂದು ನಿರೀಕ್ಷಿಸುವುದು ತಪ್ಪು.

ಕೇರಳದಲ್ಲಿ ಆನೆಯೊಂದು ಬಾಂಬ್ ಮಿಶ್ರಿತ ಅನನಾಸು ತಿಂದು ಸತ್ತಾಗ ಮೊಸಳೆ ಕಣ್ಣೀರು ಸುರಿಸಿ ನೌಟಂಕಿ ಮಾಡಿದ ಬಿಜೆಪಿ ಅಂಧಭಕ್ತರು, ಬಿಜೆಪಿ ಐಟಿ ಸೆಲ್ ಆನೆಯನ್ನೇ ಕೊಲ್ಲುತ್ತೇನೆ ಎಂದ ಹರೀಶ್ ಪೂಂಜಾ ಬಗ್ಗೆ ತುಟಿ ಬಿಚ್ವುತ್ತಿಲ್ಲ.

ಒಂದು ವೇಳೆ ಪಶ್ಚಿಮಘಟ್ಟದ ಕಾಡಂಚಿನ ಪ್ರದೇಶದ ಕಾಂಗ್ರೆಸ್ ಶಾಸಕ ಏನಾದರೂ ಇಂತಾ ಹೇಳಿಕೆ ಕೊಟ್ಟಿದ್ದರೆ ಇದೇ ಬಿಜೆಪಿಗರು ಆನೆಯ ಲದ್ದಿ ತಮ್ಮ ಮೈಮೇಲೆ ಸುರಿದು ಕೊಂಡು ಪ್ರತಿಭಟನೆ ಮಾಡುತ್ತಿದ್ದರು. ಆನೆ ನಮ್ಮ ದೇವರು ಎಂದು ಸೋಶಿಯಲ್ ಮೀಡಿಯಾದಲ್ಲಿ ಆನೆಗಿಂತಲೂ ಜೋರಾಗಿ ಘೀಳಿಡುತ್ತಿದ್ದರು, ಆದರೆ ಅವರೆಲ್ಲರೂ ಈಗ ಮೌನವಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಚಿರತೆಗೆ ಅವಮಾನ ಮಾಡಿದ್ದಾರೆಂದು ಕಾಂಗ್ರೆಸ್ ಕಾರ್ಯಕರ್ತ ಸುನೀಲ್ ಬಜಿಲಕೇರಿ ಮೇಲೆ ಪೋಲಿಸ್ ಠಾಣೆಯಲ್ಲಿ ಸುಳ್ಳು ಕೇಸು ದಾಖಲಿಸಿದ್ದ ಬಿಜೆಪಿಗರು ಈಗ ಆನೆ ಕೊಲ್ಲಲು “ಬೆಡಿ” ಹುಡುಕುತ್ತಿದ್ದಾರೋ ಏನೋ ಗೊತ್ತಿಲ್ಲ. ತಮಗೆ ಬೇಕೆಂದಾಗ ಆನೆ ಗಣಪತಿ ದೇವರಾಗುತ್ತಾರೆ, ತಮಗೆ ಬೇಡವೆಂದಾಗ ಆನೆ ದೇವರೂ ಅಲ್ಲ ಎಂತದೂ ಅಲ್ಲ. ಒಟ್ಟಿನಲ್ಲಿ ಬಿಜೆಪಿ ನಾಯಕರದ್ದು ಭಾವನೆಗಳೇ ಇಲ್ಲದ ಮನಸ್ಸು ಎನ್ನುವುದು ಸಾಭೀತಾಗುತ್ತಿದೆ.

ಆನೆ ಹೊಡೆಯುತ್ತೇನೆಂದ ಹರೀಶ್ ಪೂಂಜಾ ಹೇಳಿಕೆಯ ನಂತರ ಕೆಲವು ಅನುಮಾನಗಳು ಹುಟ್ಟುತ್ತವೆ, ಕಾಡಂಚಿನ ಪ್ರದೇಶದಲ್ಲಿ ಆನೆಗಳ ಅನುಮಾನಾಸ್ಪದ ಸಾವಾಗಿದ್ದರೆ ಅರಣ್ಯ ಇಲಾಖೆ ಕೂಡಲೇ ಕೂಲಂಕುಶ ತನಿಖೆ ನಡೆಸುವುದು ಒಳಿತು.

ಕೃಪೆ : ಫೇಸ್ಬುಕ್

Advertisement

Trending