Connect with us

Politics

ಯಶ್ಪಾಲ್ ಸುವರ್ಣರ ಸೇಡಿನ ರಾಜಕೀಯ ಉಡುಪಿಯ ಅಭಿವೃದ್ಧಿಗೆ ಮಾರಕ: ಮಾಜಿ ಶಾಸಕ ರಘುಪತಿ ಭಟ್ ಬೇಸರ

Published

on

ಉಡುಪಿ.ಜ.22. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಕ್ಷೇತ್ರದ ಶಾಸಕನಾಗಿ ಕೆಲಸ ಮಾಡುವುದು ಬಿಟ್ಟು ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ಉಡುಪಿ ಮಾಜಿ ಶಾಸಕರಾದ ರಘುಪತಿ ಭಟ್ ಆರೋಪ ಮಾಡಿದ್ದಾರೆ.

ಅವರು ಇಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ನಾನು ಕಾಂಗ್ರೆಸಿನ ಯು.ಆರ್. ಸಭಾಪತಿ, ಪ್ರಮೋದ್ ಮದ್ವರಾಜ್ ಅವರನ್ನು ಎದುರಿಸಿಕೊಂಡು ರಾಜಕಾರಣ ಮಾಡಿ ಬಂದವನು. ನಾವು ರಾಜಕಾರರಣದಲ್ಲಿ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಪರಸ್ಪರ ವಿರೋದ ಮಾಡುತ್ತಿದ್ದೇವೆಯೇ ಹೊರತು ಯಾವತ್ತೂ ವೈಯುಕ್ತಿಕ ದ್ವೇಷವನ್ನು ಮಾಡಿದವರಲ್ಲ. ವೈಯುಕ್ತಿಕ ವ್ಯವಹಾರಗಳಲ್ಲಿ ಯಶ್ಪಾಲ್ ಸುವರ್ಣ ಅನಗತ್ಯವಾಗಿ ಸೇಡಿನ ರಾಜಕೀಯ ಮಾಡುತ್ತಿದ್ದಾರೆ ಎಂದು ರಘುಪತಿ ಭಟ್ ‌ಆಕ್ರೋಶ ವ್ಯಕ್ತಪಡಿಸಿದರು.

ಯಶ್ಪಾಲ್ ಸುವರ್ಣ ಅವರ ವೈಯಕ್ತಿಕ ಬೆಳವಣಿಗೆಯಲ್ಲಿ ನನ್ನ ಕೊಡುಗೆ ಇದೆ, ಬಿಜೆಪಿ ಭಂಡಾಯ ಅಭ್ಯರ್ಥಿಯ ಬೆಂಬಲಿಗರಾಗಿ ನನ್ನ ಚುನಾವಣೆಯಲ್ಲಿ ಕೆಲಸ ಮಾಡಿದ್ದ ಹಾಗೂ ಮಲ್ಪೆಯ ಬೆತ್ತಲೆ ಪ್ರಕರಣದ ಆರೋಪಿಯಾಗಿದ್ದ ಯಶ್ಪಾಲ್ ಸುವರ್ಣ ಅವರನ್ನು ಯಾವುದೇ ದ್ವೇಷ ರಾಜಕಾರಣ ಮಾಡದೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿ ಪಕ್ಷದಲ್ಲಿ ಬೆಳೆಯುವಲ್ಲಿ ಸಹಕಾರ ನೀಡಿದ್ದೇನೆ.

ಯಶ್ಪಾಲ್ ಸುವರ್ಣ ಅವರನ್ನು ನಗರಸಭೆಗೆ ನಾಮನಿರ್ದೇಶನ ಹಾಗೂ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಗಿರಿ ಲಭಿಸುವಂತೆ ಸಹಕಾರ ನೀಡಿದ್ದೇನೆ. ಇಷ್ಟೆಲ್ಲಾ ಸಹಕಾರ ನೀಡಿದರುಯ ಯಾವುದೇ ಕೃತಜ್ಙತಾ ಭಾವನೆ ಇಲ್ಲದ ಯಶ್ಪಾಲ್ ಸುವರ್ಣ ಅವರು ಕೃತಘ್ನ ಹಾಗೂ ಹಿರಿಯರಿಗೆ ಗೌರವ ಕೊಡದವರು ಎಂದು ಬೇಸರ ವ್ಯಕ್ತಪಡಿಸಿದರು.

ನನ್ನ ವಿರುದ್ದದ ದ್ವೇಷದಿಂದ ನನ್ನ ಅವಧಿಯಲ್ಲಿ ಜಾರಿಯಾದ ಯೊಇಜನೆಗಳಿಗೆ ಶಾಸಕರು ತಡೆಯೊಡ್ಡುತ್ತಿರುವುದು ಇದು ಶಾಕರಯ ಉಡುಪಿಯ ಜನತೆಗೆ ಮಾಡುವ ದ್ರೋಹವಾಗಿದೆ ಎಂದು ನೇರವಾಗಿ ಆರೋಪ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರ ಆಪ್ತರಾದ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.

Advertisement

Trending