Connect with us

Politics

ನಿಟ್ಟೆ ಭಜರಂಗದಳ ನೇತೃತ್ವದಲ್ಲಿ ದತ್ತಹೋಮ ಧಾರ್ಮಿಕ ಸಭೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Published

on

ಕಾರ್ಕಳ ಡಿ.13. ನಿಟ್ಟೆ: ಶ್ರೀ ರಾಜರಾಜೇಶ್ವರಿ ಸದ್ಗುರು ನಿತ್ಯಾನಂದ ಕ್ಷೇತ್ರ ನೆಲ್ಲಿ ನಿಟ್ಟೆ
2025 ರ ಜನವರಿ 28 ರಿಂದ ಫೆಬ್ರವರಿ 05 ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಇಂದು13.12.2024 ರಂದು ಅಥಿತಿ ಗಣ್ಯರ ಉಪಸ್ಥಿತಿಯಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಹಾಗೂ ವಿಶ್ವ ಹಿಂದೂ ಪರಿಷದ್ ಬಜರಂಗದಳ ನಿಟ್ಟೆ ವತಿಯಿಂದ ದತ್ತಜಯಂತಿ ಅಂಗವಾಗಿ ದತ್ತ ಪೂಜೆ ದತ್ತ ಹೋಮ ಹಾಗೂ ಧಾರ್ಮಿಕ ಸಭೆ ನಡೆಯಲಿದೆ.

ಸಂಜೆ 6:30 ಕ್ಕೆ ಹೋಮದ ಪೂರ್ಣಾಹುತಿ ನಂತರ ಧಾರ್ಮಿಕ ಸಭೆಯ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಮಾಣಿಲ ಬಂಟ್ವಾಳ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಕಾರ್ಯಕ್ರಮದ ನಂತರ ಅನ್ನಸಂತರ್ಪಣೆ ನಡೆಯಲಿದೆ ಹಾಗೂ ರಾತ್ರಿ ಸುಮಾರು ನೂರು ಜನ ದತ್ತ ಮಾಲಾಧಾರಿಗಳು ನಿಟ್ಟೆ ಯಿಂದ ದತ್ತಪೀಠಕ್ಕೆ ಯಾತ್ರೆ ಹೊರಡಲಿದ್ದಾರೆ ಎಂದು ಕಾರ್ಕಳ ಭಜರಂಗದಳ ಸಂಚಾಲಕರಾದ ಮನೀಶ್ ನಿಟ್ಟೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Trending