Connect with us

Sports

ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

Published

on

Oplus_131072

ಕಾರ್ಕಳದ ಕಬಡ್ಡಿ ಆಟಗಾರ ಪ್ರೀತಮ್ ಶೆಟ್ಟಿ ನಿಧನಕ್ಕೆ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಸಂತಾಪ ಸೂಚಿಸಿದ್ದಾರೆ.

ಕಾರ್ಕಳದ ಮುಟ್ಲುಪಾಡಿಯ ಯುವ ಆಟಗಾರ ನಡುಮನೆ ಪ್ರೀತಮ್ ಶೆಟ್ಟಿಯವರ ನಿಧನದ ವಾರ್ತೆ ಕೇಳಿ ಮನಸ್ಸಿಗೆ ಅತೀವ ನೋವುಂಟಾಗಿದೆ. ಕಬಡ್ಡಿ ಆಟದಲ್ಲಿ ಅತ್ಯಮೋಘ ಸಾಧನೆಗೈಯುತ್ತಾ ತನ್ನ ಕ್ರೀಡಾಬದುಕಿನ ಸಾಧನೆಗಾಗಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿದ್ದ ಕಬಡ್ಡಿ ಪಂದ್ಯಾಟ ನಿರತರಾಗಿದ್ದ ಸಂದರ್ಭದಲ್ಲಿ ಹಠಾತ್ ಎದೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸುವ ಮೊದಲೇ ವಿಧಿವಶರಾಗಿದ್ದು ದುರ್ದೈವ. ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಆತಂಕಕಾರಿಯಾಗಿದೆ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಹಾಗೂ ಕುಟುಂಬ ವರ್ಗಕ್ಕೆ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Trending