Connect with us

Sports

ಕಂಬಳಕ್ಕೆ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆಗೆ ವಿಶೇಷ ಅನುದಾನ ಸಂಹಿತೆ: ಸಿದ್ದರಾಮಯ್ಯ

Published

on

ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾದ ಕಂಬಳಕ್ಕೆ ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆ ನೀಡುವ ಸಂಬಂದ ಹಾಗೂ ಕಂಬಳ ಸಂಘಟನೆಗಳು ನಡೆಸುವ ಸಂಸ್ಥೆಗಳಿಗೆ ಅನುದಾನ ಬಿಡುಗಡೆಗಾಗಿ ವಿಶೇಷ ಅನುದಾನ ಸಂಹಿತೆ ನಿಯಮ ರಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸನ್ಮಾನ್ಯ ಸಿದ್ದರಾಮಯ್ಯ ಹೇಳಿದರು.

ವಿಧಾನಪರಿಷತ್ತಿನಲ್ಲಿ ಸದಸ್ಯರಾದ ಕರಾವಳಿಯವರೇ ಆದ ಮಂಜುನಾಥ ಭಂಡಾರಿಯವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಕಂಬಳ ಅಸೋಸಿಯೇಷನ್, ಗೆ ಕ್ರೀಡಾ ಪ್ರಾಧಿಕಾರದಲ್ಲಿ ಮಾನ್ಯತೆ ನೀಡುವ ಸಂಬಂದ ಸಲ್ಲಿಸಬೇಕಾಗಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಆಗಿದೆ. ಯುವ ವ್ಯವಹಾರ ಹಾಗೂ ಕ್ರೀಡಾ ಮಂತ್ರಾಲಯದವರು ರಾಷ್ಟ್ರೀಯ ಕ್ರೀಡಾ ಫೆಡರೇಷನ್,ಗೆ ನೀಡಿರುವ ಮಾನ್ಯತೆ ಪತ್ರ ಹಾಗೂ ರಾಷ್ಟ್ರೀಯ ಕ್ರೀಡಾ ಫೆಡರೇಷನ್,ನವರು ರಾಜ್ಯ ಕ್ರೀಡಾ ಸಂಸ್ಥೆಗೆ ಮಾನ್ಯತೆ ನೀಡಿರುವ ಪತ್ರ ಹೊರತು ಪಡಿಸಿ ಉಳಿದ ದಾಖಲೆಗಳನ್ನು ದೃಢೀಕರಿಸಿ ಸಲ್ಲಿಸಲಾಗಿದೆ ಎಂದರು.

Advertisement

Trending