Connect with us

Business

ಪಂಚರ್ ಟೈರಿಗೂ GST ಬಂದರೆ ಅಚ್ಚರಿ ಪಡಬೇಕಿಲ್ಲ: ಹಳೆ ಕಾರು ಮಾರಾಟಕ್ಕೆ GST ವ್ಯಾಪಕ ಆಕ್ರೋಶ

Published

on

Oplus_131072

ಹಳೆಯ ಕಾರುಗಳು:
ಭಾರತದಲ್ಲಿ ಬಹು ಸಂಖ್ಯೆಯ ಜನರು ಆರಂಭದಲ್ಲಿ ಹೊಸ ಕಾರು ಖರೀದಿಸಲು ಇಚ್ಛಿಸುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಆರ್ಥಿಕ ಪರಿಸ್ಥಿತಿ. ಎರಡನೆಯ ಕಾರಣ ಏನೆಂದರೆ ಮೊದಲೇ ಹೊಸಕಾರನ್ನು ಖರೀದಿಸಿ ಅದನ್ನು ಚಲಾಯಿಸುವ ಅನುಭವ ವಿಲ್ಲದೆ ಎಲ್ಲೋ ಹೊಂಡಕ್ಕೆ ಹಾಕಿ ಅಥವಾ ಗೋಡೆ ಗಳಿಗೋ ಇತರ ವಾಹ ನಕ್ಕೋ ಉಜ್ಜಿ ವಿರೂಪಗೊಳಿಸಿ ಮನಸ್ಸಿಗೆ ನೋವು ಉಂಡುಮಾಡಿಕೊಳ್ಳುವುದನ್ನು ತಪ್ಪಿಸಲು, ಹಳೆಯ ಕಾರನ್ನು ಚಲಾಯಿಸಿ, ಅನುಭವ ಹೊಂದಿದ ಮೇಲೆ ಹೊಸ ಕಾರನ್ನು ಖರೀದಿಸಲು ಇಚ್ಛಿಸುತ್ತಾರೆ.
ಇಂದು ಐಷಾರಾಮಿ ಕಾರುಗಳನ್ನು ಹೊಂದಿರುವ ಎಲ್ಲಾ ಕಾರ್ ಮಾಲಕರ ಇತಿಹಾಸ ಇದಕ್ಕಿಂತ ಭಿನ್ನವಿಲ್ಲ.
ಆರ್ಥಿಕ ಪರಿಸ್ಥಿತಿ ಉತ್ತಮವಿಲ್ಲದ ಜನರು ಪ್ರತೀ ಬಾರಿ ಕಾರ್ ಬದಲಾವಣೆ ಮಾಡಬೇಕಾದರೆ ಹಳೆಯಕಾರನ್ನೇ ಖರೀದಿಸುತ್ತಾರೆ.
ಮತ್ತೊಂದು ವಿಶೇಷವೆಂದರೆ ಆರಂಭದಲ್ಲಿ ಹೆಚ್ಚಿನವರು ಚಲಾಯಿಸಿರುವ ಕಾರು ಮಾರುತಿ ಕಂಪೆನಿಯದ್ದು. ಅತೀ ಕಡಿಮೆ ಬಜೆಟ್ ನಲ್ಲಿ ಖರೀದಿಗೆ ದೊರಕುವುದು ಮತ್ತು ಅತೀ ಕಡಿಮೆ ರಿಪೇರಿ ವೆಚ್ಚ.
ಒಂದೇ ಕಾರಿನ ಬಳಕೆಯಿಂದ ಬೋರ್ ಹೊಡೆದ ಮೇಲೆ ಅಥವಾ ಬೇರೆ ಸೆಗ್ಮೆಂಟ್/ ಕಂಪನಿಯ ಅಥವಾ ಹೊಸ / ಹಳೆಯ ಕಾರು ಖರೀದಿ ಮಾಡಲು ಹಣ ಹೊಂದಾಣಿಕೆಗೆ ತನ್ನ ಹಳೆಯ ಕಾರನ್ನು ಮಾರಾಟ ಮಾಡುವುದು ಭಾರತದಲ್ಲಿ ಸಹಜ ವ್ಯವಹಾರವಾಗಿದೆ.
ಹೊಸ ಕಾರನ್ನು ಖರೀದಿ ಮಾಡಬೇಕಾದರೆ ಹಣ ಹೊಂದಾಣಿಕೆ ಮಾಡಲು ಹಳೆಯ ಕಾರನ್ನು ಮಾರುವುದು ಸಹಜ .
ಹಳೆಯ ಕಾರು ಮಾರಾಟ ಮಾಡಿ ಬಂದ ಹಣಕ್ಕೆ ಜಿ ಎಸ್ ಟಿ (ತೆರಿಗೆ) ಪಾವತಿಯ ಪದ್ಧತಿ ಈವರೆಗೆ ಇರಲಿಲ್ಲ. ಹಾಗಾಗಿ ಜನರು ತಮ್ಮ ಆರ್ಥಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗೆಟುಕುವ ದರದಲ್ಲಿ ಕಾರು ಮಾಲಕನಾಗಿ ತಮ್ಮ ಸಂಸಾರದೊಂದಿಗೆ ಖುಷಿಯಾಗಿದ್ದರು.
ಇದು ನಮ್ಮ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ರವರಿಗೆ ಸಹಿಸಲು ಸಾದ್ಯ ಆಗಲಿಲ್ಲ.
ಹೀಗಾಗಿ ಈ ವ್ಯವಹಾರಕ್ಕೂ ಜಿ ಎಸ್ ಟಿ ಯನ್ನು ಕಟ್ಟಬೇಕು ಎಂದು ಆಜ್ಞೆ ಹೊರಡಿಸಿದ್ದಾರೆ.
ವರ್ಷಗಳ ಹಿಂದೆ ( ಒಂದು, ಎರಡು, ಮೂರು…… ಇತ್ಯಾದಿ) ಖರೀದಿಸಿದ ಕಾರನ್ನು ಮಾರಾಟ ಮಾಡುವಾಗ 18% GST (ಒಂದು ಲಕ್ಷಕ್ಕೆ ಹದಿನೆಂಟು ಸಾವಿರ) ರೂಪವಾಗಿ ಸರಕಾರಕ್ಕೆ ಹಣ ನೀಡಬೇಕಂತೆ
ಒಂದು ಕಾರನ್ನು ಖರೀದಿಸಿದಾಗ ವರ್ಷ ಒಂದು ಕಳೆದಾಗ ಅದರ ಬೆಲೆ Depreciation (ಸವಕಲು) 25000/- ರೂಪಾಯಿ ವರ್ಷವೊಂದಕ್ಕೆ ಕಡಿಮೆಯಾಗುತ್ತದೆ.
ಅಂದರೆ ಖರೀದಿಮಾಡುವಾಗ ಒಂದು ವಾಹನಕ್ಕೆ 500000/-(ಐದು ಲಕ್ಷ) ಶೋ ರೂಮ್ ದರ ಇದ್ದರೆ ಕರ್ನಾಟಕದಲ್ಲಿ ರಸ್ತೆ ತೆರಿಗೆ, ಜಿ ಎಸ್ ಟಿ, ಮತ್ತು ಇತರ ಸರಕಾರಿ ತೆರಿಗೆಗಳು ಸೇರಿ 11 ರಿಂದ 12 ಲಕ್ಷದ ವರೆಗೆ ತಲುಪಿರುತ್ತದೆ. ಈ ಎಲ್ಲಾ ತೆರಿಗೆಗಳನ್ನು ಸೇರಿಸಿ ನಾವು ಖರೀದಿಸುತ್ತೇವೆ.
ನಮ್ಮ ನಿರ್ಮಲಕ್ಕ, ಮೊದಲೇ ಹಣ ಕಳೆದುಕೊಂಡ ದುಃಖದಲ್ಲಿರುವ ನಮಗೆ, ನಾವು ಎರಡೋ ಮೂರೋ ವರ್ಷ ಉಪಯೋಗಿಸಿ ಮಾರಾಟ ಮಾಡಲು ನಿರ್ಧರಿಸಿರುವ ಈ ಕಾರಿನ ಮೆಲ್ವೆ ಹೆಚ್ಚುವರಿಯಾಗೆ 18% ಜಿ ಎಸ್ ಟಿ ಕಟ್ಟ ಬೇಕು ಎಂದು ಕಾನೂನು ಮಾಡಿದ್ದಾರೆ.
ಹತ್ತು ಲಕ್ಷದ ಕಾರುನ್ನು ಖರೀದಿಸಿದ ಬಳಿಕ ಮೂರು ವರ್ಷದಲ್ಲಿ ಮಾರಾಟಮಾಡುವಾಗ 25 ಸಾವಿರದಂತೆ ಮೂರುವರ್ಷಕ್ಕೆ 75 ಸಾವಿರ Depreciation ಆಗಿ ಅದರ ಬೆಲೆ 925000( ಒಂಬತ್ತು ಲಕ್ಷ ಇಪ್ಪತ್ತೈದು ಸಾವಿರ)
ನಿಮಗೆ ಮಾರುಕಟ್ಟೆಯಲ್ಲಿ ಈ ಹಳೆ ವಾಹನವನ್ನು ಎಂಟು ಅಥವಾ ಎಂಟೂ ವರೆ ಲಕ್ಷ ಬೆಲೆ ಸಿಗಬಹುದು.
ಆದರೆ ಸರಕಾರಕ್ಕೆ ಒಂಬತ್ತು ಲಕ್ಷ ಇಪ್ಪತ್ತೈದು ಸಾವಿರ ಮೌಲ್ಯದ ಮೇಲೆ 18% (ರೂ- 166500/-) ಕಟ್ಟಬೇಕು.
ಈಗ ನಿಮ್ಮ ವಾಹನದ ಮಾರಾಟದಿಂದ ಬರುವ ಹಣವನ್ನು ಲೆಕ್ಕ ಹಾಕಿ.
ಅದೇ ರೀತಿ ಮೂರು ವರ್ಷದ ಬಳಿಕ ಸರಕಾರದ ಜಿಎಸ್ಟಿ ಸೇರಿಸಿದ್ರೆ ಸರಕಾರದ ಪ್ರಕಾರ ನಿಮ್ಮ ವಾಹನದ ಬೆಲೆ ಎಷ್ಟು?
ಸಾಮಾನ್ಯ ಪ್ರಜೆಗಳನ್ನು ಹಿಂದೂ ಮುಸ್ಲಿಂ ಎಂದು ಕೋಮು ದ್ವೇಷ ದಲ್ಲಿ ಮುಳುಗಿಸಿ ತೆರಿಗೆಯ ಮೇಲೆ ತೆರಿಗೆ ವಿಧಿಸಿ ನಮ್ಮನ್ನು ಊಟಕ್ಕೆ ಗತಿ ಇಲ್ಲದವರಂತೆ ಮಾಡುವ ಆರ್ಥಿಕ ಸಚಿವೆ.
ಕನಿಷ್ಠ ಪಾಪ್ ಕಾರ್ನ್ ತಿನ್ನುವಾ
ಅಂದರೆ ಅದಕ್ಕೂ ಜಿ ಎಸ್ ಟಿ!
ಇನ್ನು ಪಂಚರ್ ಆದ ಕಾರ್ ನ ಟೈರ್ ಗೆ
ಜಿ ಎಸ್ ಟಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ!

ದಿನೇಶ್ ಹೆಗ್ಡೆ ಉಳೆಪಾಡಿ,

Advertisement

Trending