Connect with us

Business

ಕಲ್ಯಾ ಗ್ರಾಮದ ಮೀಸಲು ಅರಣ್ಯ ಪ್ರದೇಶದಲ್ಲಿ ಕ್ರಶರ್ ಉದ್ಯಮಿಯಿಂದ ಅಕ್ರಮ ರಸ್ತೆ ನಿರ್ಮಾಣವಾದರೂ ಮೌನವಾಗಿರುವ ಇಲಾಖೆಗಳು: ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗಳಿಗೆ ದೂರು

Published

on

ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಕೈರಬೆಟ್ಟು ಪಾಂಚೊಟ್ಟು ಎಂಬಲ್ಲಿ ಕ್ರಶರ್ ಉದ್ಯಮಿಯೊಬ್ಬರು ಮೀಸಲು ಅರಣ್ಯ ಪ್ರದೇಶವನ್ನು ಅತಿಕ್ರಮಣ ನಡೆಸಿ ರಸ್ತೆ ನಿರ್ಮಾಣ ಮಾಡಿದ ಘಟನೆ ವರದಿಯಾಗಿದೆ.

ಕಾರ್ಕಳದ ಕಲ್ಯಾ ಗ್ರಾಮ ದ ಸರ್ವೆ ನಂಬ್ರ 233/1 ರ ಮೀಸಲು‌ ಅರಣ್ಯ ಪ್ರದೇಶವಾಗಿರುವ ಕೈರಬೆಟ್ಟು ಪಾಂಜೋಟ್ಟು ಎಂಬಲ್ಲಿ ಕ್ರಶರ್ ಉದ್ಯಮಿಯೊಬ್ಬರ ಜೊತೆಗೆ ಅಕ್ಕಪಕ್ಕದ ಖಾಸಗಿ ಜಾಗದ ವ್ಯಕ್ತಿಗಳು ಸೇರಿಕೊಂಡು ಗಣಿಗಾರಿಕೆ ಸಂಬಂಧ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿ ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆಂದು ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಘಟನೆ ನಡೆದಿದೆ.

ಈ‌ ಬಗ್ಗೆ ಗ್ರಾಮಸ್ಥರು ಕಲ್ಯಾ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯವರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಳ್ಳದ ಕಾರಣ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಕಲ್ಯಾ ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ಕಳೆದ 3 ದಿನಗಳಿಂದ ನಿರಂತರವಾಗಿ ಸರಕಾರಿ ಜಾಗವನ್ನು ಸಮತಟ್ಟು ಮಾಡಿ ರಸ್ತೆ ನಿರ್ಮಾಣ ನಡೆಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡಿದ ಕಾರಣ ಬೆಲೆ ಬಾಳುವ ಮರಗಳನ್ನು ನಾಶಗೊಳಿಸಿ ಅರಣ್ಯ ಇಲಾಖೆಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದರೂ ಸಂಬಂದಪಟ್ಟ ಇಲಾಖೆಗಳು ಯಾವುದೇ ಕ್ರಮಕೈಗೊಳ್ಳದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

Advertisement

Trending