Connect with us

ರಾಜ್ಯ

ಎಸ್.ಎಮ್. ಕೃಷ್ಣ ನಿಧನಕ್ಕೆ ಉದಯ ಶೆಟ್ಟಿ ಮುನಿಯಾಲು ಸಂತಾಪ

Published

on

ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮಾಜಿ ಕೇಂದ್ರ ಸಚಿವರಾದ ಎಸ್ಎಂ ಕೃಷ್ಣರವರ ನಿಧನದ ಸುದ್ದಿ ತಿಳಿದು ಅತೀವ ದುಃಖವಾಯಿತು. ಎಸ್.ಎಂ. ಕೃಷ್ಣರವರು ಮಾಹಿತಿ ತಂತ್ರಜ್ಞಾನದ ಪಿತಾಮಹರಾಗಿ, ಬೆಂಗಳೂರಿನ ನವನಿರ್ಮಾತೃ, ಆಧುನಿಕ ಕರ್ನಾಟಕದ ಅಭಿವೃದ್ಧಿಯ ಹರಿಕಾರ ಎಂದೇ ಖ್ಯಾತರಾದವರು. ಎಸ್.ಎಮ್.ಕೃಷ್ಣರವರ ದೂರದೃಷ್ಠಿಯ ನಾಯಕತ್ವದಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಜಾಗತಿಕ ಮನ್ನಣೆ ದೊರಕುವಂತಾಯಿತು.

ರಾಜ್ಯದ ಮುಖ್ಯಮಂತ್ರಿಗಳಾಗಿ, ಕೇಂದ್ರದ ಸಚಿವರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ಈ ದೇಶಕ್ಕೆ ಕೃಷ್ಣರವರ ಸೇವೆ ಸ್ಮರಣೀಯವಾಗಿದೆ. ಎಸ್.ಎಮ್.ಕೃಷ್ಣರವರನ್ನು ಕಳೆದುಕೊಂಡು ದುಃಖದಲ್ಲಿರುವ ಅವರವ ಕುಟುಂಬ ವರ್ಗಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾರ್ಥಿಸುತ್ತಾ ಅಗಲಿದ ದಿವ್ಯಾತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಉದಯ ಶೆಟ್ಟಿ ಮುನಿಯಾಲು ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Trending