Business
ನ್ಯೂಸ್ ಕಾರ್ಲ ವೆಬ್ ನ್ಯೂಸ್ ವರದಿ ಸುಳ್ಳು ನಾನು ನನ್ನ ಹೇಳಿಕೆಗೆ ಬದ್ದ, ಪ್ರತಿಭಟನಾಕಾರರ ವಿರುದ್ದ ಮಾತನಾಡುವ ರೇಷ್ಮಾ ಶೆಟ್ಟಿ ಅದಾನಿಯ ವಕ್ತಾರರೇ..? ಸರಿತಾ ಶೆಟ್ಟಿ ಇನ್ನಾ ಪ್ರಶ್ನೆ

ಅಧಿಕಾರದಲ್ಲಿರುವಾಗ ಇನ್ನಾ ಗ್ರಾಮಸ್ಥರ ಮೇಲೆ ಕಾಳಜಿ ಇಲ್ಲದೆ ಪವರ್ ಪ್ರಾಜೆಕ್ಟ್ ವಿದ್ಯುತ್ ಲೈನಿಗೆ ಅನುಮತಿ ನೀಡಿದ ಬಿಜೆಪಿಗರು ಇಂದು ವಿದ್ಯುತ್ ಲೈನ್ ಯೋಜನೆ ವಿರುದ್ಧ ಪ್ರತಿಭಟಿಸುತ್ತಿರುವ ಸಂತ್ರಸ್ಥರನ್ನು ಹಾಗೂ ಪ್ರತಿಭಟನಾಕಾರರನ್ನು ನಿಂದಿಸುತ್ತಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ ಸುನಿಲ್ ಕುಮಾರ್ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಮೋದಿ ಆಪ್ತ ಅದಾನಿಯನ್ನು ಮೆಚ್ಚಿಸಲು ಅದಾನಿ ವಿದ್ಯುತ್ ಲೈನ್ ಯೋಜನೆಗೆ ಅನುಮತಿ ನೀಡಲಾಗಿತ್ತು. ಇನ್ನಾ ಗ್ರಾಮಸ್ಥರನ್ನು ಕತ್ತಲೆಯಲ್ಲಿಟ್ಟು ಕೃಷಿಕರನ್ನು ಸಂತ್ರಸ್ತರನ್ನಾಗಿಸಿದವರು ಇಂದು ಪ್ರತಿಭಟನಾಕಾರರನ್ನು ನಿಂದಿಸುತ್ತಿರುವುದು ಖಂಡನಾರ್ಹ.
ಇನಾ ಗ್ರಾಮದ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಆಪೋಶನ ತೆಗೆದುಕೊಳ್ಳುತ್ತಿರುವ ವಿದ್ಯುತ್ ಲೈನ್ ಯೋಜನೆಯ ವಿರುದ್ಧ ಗ್ರಾಮಸ್ಥರೆಲ್ಲ ಒಂದಾಗಿ ಪ್ರತಿಭಟನೆ ನಡೆಸುತ್ತಿರುವಾಗ ಅದಾನಿ ಯೋಜನೆಯ ಫಲಾನುಭವಿಗಳಂತೆ ವರ್ತಿಸುತ್ತಿರುವ ಇನ್ನಾ ಗ್ರಾಮದವರೇ ಆದ ರೇಷ್ಮಾ ಉದಯ ಶೆಟ್ಟಿ ವಿದ್ಯುತ್ ಲೈನ್ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರನ್ನು ನಿಂದಿಸುತ್ತಿರುವುದು ಖಂಡನಾರ್ಹ. ನಾಲ್ಕು ದಿನಗಳಿಂದ ಗ್ರಾಮಸ್ಥರು ಒಂದಾಗಿ ಪ್ರತಿಭಟನೆಯ ಬಗ್ಗೆ ರಾಜಕೀಯ ಪ್ರೇರಿತವಾಗಿ ಕೊಂಕು ನುಡಿಯುತ್ತಿರುವುದು ಇವರಿಗೆ ಗ್ರಾಮಸ್ಥರ ಮೇಲೆ ಎಷ್ಟು ಕಾಳಜಿ ಇದೆ ಎನ್ನುವುದನ್ನು ಸೂಚಿಸುತ್ತದೆ.
ಬಿಜೆಪಿ ಸರ್ಕಾರ ಆಡಳಿತದಲ್ಲಿರುವಾಗ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಇಂಧನ ಸಚಿವರಾಗಿರುವಾಗ ಯೋಜನೆಗೆ ವಿರೋಧವನ್ನು ಮಾಡದೆ ಅನುಮತಿಯನ್ನು ನೀಡಿದಾಗ ರೇಷ್ಮಾ ಉದಯ ಶೆಟ್ಟಿ ಎಲ್ಲಿದ್ದರು..?
ಬಿಸಿ ಭೂಮಿಯನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಗ್ರಾಮಸ್ಥರು ಸಮಾನ ಮಸ್ಕರೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತಿದ್ದರು ಪ್ರತಿಭಟನಾ ಸ್ಥಳಕ್ಕೆ ಕ್ಷೇತ್ರದ ಶಾಸಕರಾಗಲಿ ರೇಷ್ಮಾ ಉದಯ ಶೆಟ್ಟಿಯಾಗಲಿ ಸಂಸದರಾಗಲಿ ಇಲ್ಲಿಯ ತನಕ ಭೇಟಿ ನೀಡದೆ ಇರುವುದರ ಕಾರಣವೇನು? ಪ್ರತಿಭಟನಾ ನಿರತ ಗ್ರಾಮಸ್ಥರ ಅಳಲನ್ನು ಕೇಳಲು ಹತ್ತಿರಕ್ಕೂ ಸುಳಿಯದ ಬಿಜೆಪಿಗರು ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಂಡಿರುವ ಉದಯಶೆಟ್ಟಿ ಮುನಿಯಾಲು ಅವರ ವಿರುದ್ಧ ಮಾತನಾಡಲು ಯಾವ ನೈತಿಕತೆಯೂ ಇಲ್ಲ. ಇನ್ನಾ ಗ್ರಾಮದ ರೈತರ ಪರವಾಗಿ ಪ್ರತಿಭಟನೆ ನಡೆಸಲು ಉದಯ ಶೆಟ್ಟಿ ಮುನಿಯಾಲ್ ಅವರಿಗೆ ಬಿಜೆಪಿಯ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ.
ರೇಷ್ಮಾ ಉದಯ ಶೆಟ್ಟಿ ಅವರು ಅಧಾನಿ ಕಂಪನಿಯ ಚೇಲಾಗಳಂತೆ ಮಾತನಾಡುವುದನ್ನು ಬಿಟ್ಟು ಅವರ ಪಕ್ಷದ ಸಂಸದರ ಮೂಲಕ ವಿದ್ಯುತ್ ಲೈನ್ ಕಾಮಗಾರಿ ಆರಂಭಿಸದಂತೆ ಕೇಂದ್ರ ಇಂಧನ ಸಚಿವರಿಗೆ ಒತ್ತಡ ಹಾಕಲು ಪ್ರಯತ್ನ ಪಡಲಿ. ಕೇಂದ್ರದ ಬಿಜೆಪಿ ಸರಕಾರ ಮನಸ್ಸು ಮಾಡಿದರೆ ಇನ್ನಾ ಗ್ರಾಮದಲ್ಲಿ ಅದಾನಿ ಟವರ್ ನಿರ್ಮಾಣ ಕಾಮಗಾರಿಯನ್ನು ಒಂದೇ ದಿನದಲ್ಲಿ ಎತ್ತಂಗಡಿ ಮಾಡಬಹುದು. ಯೋಜನೆಗೆ ಹಿಂಬಾಗಿಲಿನಿಂದ ಅನುಮೋದನೆ ಕೊಟ್ಟ ಮಾಜಿ ಸಚಿವ ಸುನೀಲ್ ಕುಮಾರ್ ಪ್ರತಿಭಟನಾ ನಿರತರನ್ನು ಭೇಟಿಯಾಗಲು ಮುಖವಿಲ್ಲದೆ ತನ್ನ ಬೆಂಬಲಿಗರನ್ನು ಪ್ರತಿಭಟನಾಕಾರರ ವಿರುದ್ದ ಛೂ ಬಿಟ್ಟಿದ್ದಾರೆ ಎಂದು ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸರಿತಾ ಶೆಟ್ಟಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
-
ವಿದೇಶ6 months ago
ಇಸ್ರೇಲ್ ದಾಳಿ: ಉತ್ತರ ಗಾಜಾದಲ್ಲಿ ವಸತಿ ಕಟ್ಟಡ ಧ್ವಂಸ; ಮಕ್ಕಳು, ಮಹಿಳೆಯರು ಸೇರಿ 93 ಪ್ಯಾಲೆಸ್ತೀನಿಯರು ಸಾವು!
-
ದೇಶ6 months ago
ಅದಾನಿ ಸಮೂಹ, ಪ್ರಮುಖ ನಿಯಂತ್ರಕ ಸಂಸ್ಥೆಗಳು, ಬಿಜೆಪಿ ನಡುವೆ ‘ಅಪಾಯಕಾರಿ ನಂಟು’: ಕಾಂಗ್ರೆಸ್ ಆರೋಪ
-
Business5 months ago
ರಾಷ್ಟ್ರೀಯ ಸಮಸ್ಯೆಯಾಗಿರುವ ನಕ್ಸಲ್ ಪಿಡುಗನ್ನು ಕೇವಲ ರಾಜ್ಯಕ್ಕೆ ಸೀಮಿತಗೊಳಿಸಿ ಮಾತನಾಡುವ ಸುನೀಲ್ ಕುಮಾರರದ್ದು ಬೌಧಿಕ ದಿವಾಳಿತನವಾಗಿದೆ: ಯೋಗೀಶ್ ಇನ್ನಾ
-
Business5 months ago
-
ಕಾರ್ಕಳ5 months ago
ಪಳ್ಳಿ ಕಣಂಜಾರು ಬೈಲೂರು ಮಾರ್ಗವಾಗಿ ಕಾರ್ಕಳಕ್ಕೆ ಸರ್ಕಾರಿ ಬಸ್ ಸೇವೆ ಆರಂಭ; ಮುನಿಯಾಲ್ ಮನವಿಗೆ ಸ್ಪಂದಿಸಿದ ಸಾರಿಗೆ ಸಚಿವ
-
ರಾಜ್ಯ6 months ago
ಹೊಂದಾಣಿಕೆ ರಾಜಕೀಯ ಮಾಡುವವರನ್ನು ಹೊರ ಹಾಕ್ತಿದ್ದೇವೆ: ವಿಜಯೇಂದ್ರ
-
ಕಾರ್ಕಳ6 months ago
ಕಾರ್ಕಳ ಹಾಗೂ ಹೆಬ್ರಿ ಬ್ಲಾಕ್ ಕಾಂಗ್ರೇಸ್ ಸಮಿತಿಗೆ ನೂತನ ಅದ್ಯಕ್ಷರ ಆಯ್ಕೆ
-
ಕಾರ್ಕಳ4 months ago
ಸಾಮಾಜಿಕ ಜಾಲತಾಣದಲ್ಲಿ ಇನ್ನಾ ರೈತಪರ ಹೋರಾಟಗಾರರ ಅವಹೇಳನ: ದೂರು ದಾಖಲು